ಪಶ್ಚಿಮಬಂಗಾಳ: ಬಿಜೆಪಿ, ತೃಣಮೂಲ ಪಕ್ಷದ ಕಾರ್ಯಕರ್ತರ ಮೃತದೇಹ ಪತ್ತೆ

Update: 2019-05-12 16:00 GMT
ಸಾಂದರ್ಭಿಕ ಚಿತ್ರ

ಮಿಡ್ನಾಪುರ/ಕೋಲ್ಕತಾ, ಮೇ 12: ಪಶ್ಚಿಮಬಂಗಾಳದಲ್ಲಿ ಲೋಕಸಭಾ ಚುನಾವಣೆಯ ಆರನೇ ಹಂತದ ಮತದಾನ ನಡೆಯುವ ಮೊದಲು ಹಾಗೂ ನಂತರ ಎರಡು ವಿಭಿನ್ನ ಪ್ರದೇಶಗಳಲ್ಲಿ ಓರ್ವ ಬಿಜೆಪಿ ಹಾಗೂ ಓರ್ವ ತೃಣಮೂಲ ಪಕ್ಷದ ಕಾರ್ಯಕರ್ತನ ಮೃತದೇಹ ಪತ್ತೆಯಾಗಿದೆ.

ಪೂರ್ವ ಮಿಡ್ನಾಪುರದ ಭಗಬಾನ್ಪುರದಲ್ಲಿ ಇತರ ಇಬ್ಬರು ಬಿಜೆಪಿ ಕಾರ್ಯಕರ್ತರ ಮೇಲೆ ಗುಂಡು ಹಾರಿಸಿದ ಘಟನೆ ನಡೆದಿದೆ. ಗಾಯಗೊಂಡ ಅನಂತ ಗುಚೈಟ್ ಹಾಗೂ ರಂಜಿತ್ ಮೈತಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

  ತೃಣಮೂಲ ಪಕ್ಷದ ಕಾರ್ಯಕರ್ತನ ಮೃತದಹೇಹ ಮರ್ಧರ ಪ್ರದೇಶದಲ್ಲಿ ರವಿವಾರ ಬೆಳಗ್ಗೆ ಪತ್ತೆಯಾಗಿದೆ. ಈ ಪ್ರದೇಶ ಕೋಟಾಯಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ. ಬಿಜೆಪಿಯ ಬೂತ್ ಮಟ್ಟದ ಕಾರ್ಯಕರ್ತ ಮೃತದೇಹ ಝಾರ್‌ಗ್ರಾಮ್‌ನ ಬೆಲೆಬೆರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಚುನ್‌ಸೋಲೆ ಗ್ರಾಮದಲ್ಲಿ ಶನಿವಾರ ರಾತ್ರಿ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 ಮೃತಪಟ್ಟ ಬಿಜೆಪಿ ಕಾರ್ಯಕರ್ತನನ್ನು ರಮಣ್ ಸಿಂಗ್ ಎಂದು ಗುರುತಿಸಲಾಗಿದೆ. ತೃಣಮೂಲ ಕಾರ್ಯಕರ್ತರು ಈ ಹತ್ಯೆ ನಡೆಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಮೃತಪಟ್ಟ ತೃಣಮೂಲ ಪಕ್ಷದ ಕಾರ್ಯಕರ್ತನನ್ನು ಸುಧಾಕರ ಮೈತಿ ಎಂದು ಗುರುತಿಸಲಾಗಿದೆ. ಅನಾರೋಗ್ಯಕ್ಕೀಡಾದ ತನ್ನ ಸಂಬಂಧಿ ಯೋರ್ವನನ್ನು ಕಾಂತಿಯ ಉಪ ವಿಭಾಗ ಆಸ್ಪತ್ರೆಯಲ್ಲಿ ಶನಿವಾರ ರಾತ್ರಿ ಭೇಟಿಯಾಗಿ ಹಿಂದಿರುಗದೇ ನಾಪತ್ತೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News