ಎಪ್ರಿಲ್‌ನಲ್ಲಿ ವಾಹನ ಮಾರಾಟ ಕಳೆದ 8 ವರ್ಷಗಳಲ್ಲೇ ಅತ್ಯಧಿಕ ಕುಸಿತ

Update: 2019-05-13 18:29 GMT

ಹೊಸದಿಲ್ಲಿ, ಮೇ 13: ಭಾರತದಲ್ಲಿ ಎಪ್ರಿಲ್ ತಿಂಗಳಲ್ಲಿ ಪ್ರಯಾಣಿಕ ವಾಹನಗಳ ಮಾರಾಟದಲ್ಲಿ ಶೇ.17ರಷ್ಟು ಇಳಿಕೆ ಕಂಡುಬಂದಿದ್ದು, ಇದು ಕಳೆದ ಎಂಟು ವರ್ಷಗಳಲ್ಲೇ ಮಾಸಿಕವಾಗಿ ಅತ್ಯಧಿಕ ಕುಸಿತವೆಂದು ಅಂತಾರಾಷ್ಟ್ರೀಯ ಸುದ್ದಿಸಂಸ್ಥೆ ರಾಯ್ಟರ್ಸ್‌, ವರದಿ ಮಾಡಿದೆ. ಭಾರತೀಯ ಆಟೊಮೊಬೈಲ್ ಉತ್ಪಾದಕರ ಕೈಗಾರಿಕಾ ಒಕ್ಕೂಟ ಬಿಡುಗಡೆಗೊಳಿಸಿದ ದತ್ತಾಂಶವನ್ನು ಆಧರಿಸಿ ಅದು ಈ ವರದಿಯನ್ನು ಪ್ರಕಟಿಸಿದೆ.

 ಈ ದತ್ತಾಂಶದ ಪ್ರಕಾರ ಪ್ರಯಾಣಿಕ ವಾಹನಗಳ ಮಾರಾಟವು ಎಪ್ರಿಲ್‌ನಲ್ಲಿ 2,47,541 ಯೂನಿಟ್‌ಗಳಿಗೆ ಕುಸಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2,98,504 ಯೂನಿಟ್‌ಗಳು ಮಾರಾಟ ವಾಗಿದ್ದವು. ಅಧಿಕ ವಿಮಾ ವೆಚ್ಚ, ದುರ್ಬಲ ಸಂವೇದನೆ ಹಾಗೂ ನಗದೀಕರಣದ ಕೊರತೆ, ಪ್ರಯಾಣಿಕ ವಾಹನಗಳ ಮಾರಾಟದಲ್ಲಿ ಕುಸಿತಕ್ಕೆ ಮುಖ್ಯ ಕಾರಣಗಳೆಂದು ವರದಿ ತಿಳಿಸಿದೆ.

  ಅಂತರ್‌ದೇಶಿಯ ಮಾರುಕಟ್ಟೆಯಲ್ಲಿ 1,60,279 ಯೂನಿಟ್ ಕಾರುಗಳು ಮಾರಾಟವಾಗಿದ್ದು, ಶೇ. 19.93 ಕ್ಕೆ ಕುಸಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2,00,183 ಕಾರ್ ಯೂನಿಟ್‌ಗಳು ಮಾರಾಟವಾಗಿದ್ದವು.

  ಮೋಟಾರ್ ಸೈಕಲ್‌ಗಳ ಮಾರಾಟದಲ್ಲಿಯೂ 11.81 ಶೇ. ಕುಸಿತವುಂಟಾಗಿದೆ. ಎಪ್ರಿಲ್‌ನಲ್ಲಿ 10,84,811 ಮೋಟಾರ್‌ ಸೈಕಲ್ ಯೂನಿಟ್‌ಗಳು ಮಾರಾಟಗೊಂಡಿದ್ದು, ಈ ವರ್ಷ ಅದೇ ಅವಧಿಯಲ್ಲಿ 12,30,046 ಯೂನಿಟ್‌ಗಳು ಮಾರಾಟವಾಗಿದ್ದವು. ಎಪ್ರಿಲ್‌ನಲ್ಲಿ ಒಟ್ಟು 16,38,388 ಯೂನಿಟ್ ದ್ವಿಚಕ್ರ ವಾಹನಗಳು ಮಾರಾಟವಾಗಿದ್ದು, ಕಳೆದ ವರ್ಷಕ್ಕಿಂತ 16.36 ಶೇಕಡ ಇಳಿಕೆ ಕಂಡಿದೆ.

 2018ರ ಎಪ್ರಿಲ್‌ನಲ್ಲಿ ವಿವಿಧ ಶ್ರೇಣಿಗಳ ವಾಹನ ಮಾರಾಟವು 23,80,294 ಯೂನಿಟ್‌ಗಳಿಂದ 20,01,096 ಯೂನಿಟ್‌ಗಳಿಗೆ ಕುಸಿದಿದೆ.

 ಕಳೆದ ತಿಂಗಳು ಮಾರುತಿ ಸುಝುಕಿ ಕಂಪೆನಿಯು ಮಾರ್ಚ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ 4,58,479 ವಾಹನಗಳನ್ನು ಮಾರಾ

 ಮಾಡಿದ್ದು, ಒಂದು ವರ್ಷದಲ್ಲಿ 0.7 ಶೇಕಡ ಇಳಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News