ಮೋದಿ ಪ್ಯಾಂಟ್ ಹಾಕುವುದು ಕಲಿಯುವ ಮುನ್ನವೇ ಕಾಂಗ್ರೆಸ್ ಸಶಸ್ತ್ರ ಪಡೆ ಕಟ್ಟಿತ್ತು: ಕಮಲ್‌ ನಾಥ್

Update: 2019-05-14 03:45 GMT

ರತ್ಲಂ (ಮಧ್ಯಪ್ರದೇಶ): ಪ್ರಧಾನಿ ನರೇಂದ್ರ ಮೋದಿ ಪ್ಯಾಂಟ್ ಧರಿಸುವುದು ಕಲಿಯುವ ಮುನ್ನವೇ ಕಾಂಗ್ರೆಸ್ ಪಕ್ಷ, ದೇಶದ ಸಶಸ್ತ್ರ ಪಡೆ ಕಟ್ಟಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್‌ ನಾಥ್ ಹೇಳಿದ್ದಾರೆ.

"ಮೋದಿಜಿ ದೇಶದ ಭದ್ರತೆ ಬಗ್ಗೆ ಮಾತನಾಡುತ್ತಾರೆ. ನಾನು ಅವರಿಗೆ ಒಂದು ಅಂಶವನ್ನಷ್ಟೇ ಹೇಳಲು ಬಯಸುತ್ತೇನೆ. ಪ್ಯಾಂಟ್ ಹೇಗೆ ಧರಿಸಬೇಕು ಎಂದು ನೀವು ಕಲಿಯುವ ಮುನ್ನವೇ ಅಂದಿನ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಮತ್ತು ಇಂದಿರಾ ಗಾಂಧಿ ದೇಶದ ಸಶಸ್ತ್ರ ಪಡೆಗಳನ್ನು ಕಟ್ಟಿದ್ದರು" ಎಂದು ಚುನಾವಣಾ ರ್ಯಾಲಿಯೊಂದರಲ್ಲಿ ಅವರು ಹೇಳಿದರು.

"ಬಿಜೆಪಿ ಆಡಳಿತದ ಅವಧಿಯಲ್ಲಿ ಹಲವು ಭಯಾನಕ ಭಯೋತ್ಪಾದಕ ದಾಳಿಗಳು ನಡೆದಿವೆ. 2002ರಲ್ಲಿ ಸಂಸತ್ ಭವನದ ಮೇಲೆ ದಾಳಿ ನಡೆದಾಗ ಕೂಡಾ ಬಿಜೆಪಿ ಅಧಿಕಾರದಲ್ಲಿತ್ತು" ಎಂದು ನೆನಪಿಸಿದರು.

"ಇಂದು ಮುಂಜಾನೆ ಮೋದಿಯವರು ರತ್ಲಂನಲ್ಲಿದ್ದರು ಎಂದು ಕೇಳಲ್ಪಟ್ಟಿದ್ದೇನೆ. ಐದು ವರ್ಷಗಳಿಂದ ಅವರು ಸುಳ್ಳು ಹೇಳುತ್ತಲೇ ಬಂದಿದ್ದಾರೆ. ನಿಮಗೆ 140 ಗಂಟೆ ಮಾತ್ರ ಇದೆ ಎಂದು ಅವರಿಗೆ ಹೇಳಬಯಸುತ್ತೇನೆ. ಬುಡಕಟ್ಟು ಜನರನ್ನು ರಕ್ಷಿಸುತ್ತೇನೆ ಎಂದು ಹೇಳಿಕೊಳ್ಳುತ್ತಿರುವ ಮೋದಿ ಕಳೆದ ಐದು ವರ್ಷಗಳಿಂದ ಎಲ್ಲಿದ್ದರು" ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News