ಪಿಎಚ್‌ಡಿ ಪೂರ್ಣಗೊಳಿಸಿದ ಡಾ. ಉಮರ್ ಖಾಲಿದ್ ಪ್ರಧಾನಿ ಮೋದಿಗೆ ಹಾಕಿದ ಸವಾಲೇನು ?

Update: 2019-05-14 13:05 GMT

ಹೊಸದಿಲ್ಲಿ, ಮೇ. 14 : ಜೆ ಎನ್ ಯು ವಿವಾದದ ಬಳಿಕ ಬೆಳಕಿಗೆ ಬಂದ ವಿದ್ಯಾರ್ಥಿ ನಾಯಕರಲ್ಲೊಬ್ಬರಾದ ಉಮರ್ ಖಾಲಿದ್ ತಮ್ಮ ಡಾಕ್ಟರೇಟ್ ಪೂರ್ಣಗೊಳಿಸಿದ್ದಾರೆ. ಈಗ ಅವರು ಡಾ. ಉಮರ್ ಖಾಲಿದ್ ! 

ಈ ಬಗ್ಗೆ ಮಂಗಳವಾರ ಫೇಸ್ ಬುಕ್ ಪೋಸ್ಟ್ ಬರೆದಿರುವ ಉಮರ್, ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸವಾಲು ಹಾಕಿದ್ದಾರೆ. "ಮೋದಿ ಸಾಹಬ್ , ಹಮ್ನೆ ತೊ ಟ್ಯಾಕ್ಸ್ ಪೇಯರ್ಸ್ ಕಾ ಹಿಸಾಬ್ ಚುಕ್ತಾ ಕಿಯಾ. ನೀವು ? ( ಮೋದಿ ಸಾಹೇಬರೇ, ನಾನು ತೆರಿಗೆ ಪಾವತಿದಾರರ ಲೆಕ್ಕ ಚುಕ್ತಾ ಮಾಡಿದೆ. ನೀವು ಯಾವಾಗ ಮಾಡುತ್ತೀರಿ ? )"  ಎಂದು ಪ್ರಧಾನಿಗೆ ಸವಾಲು ಹಾಕಿದ್ದಾರೆ ಡಾ.ಉಮರ್.  

ಜೆ ಎನ್ ಯು ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ದೇಶವಿರೋಧಿ ಘೋಷಣೆ ಕೂಗಿದ್ದಾರೆ ಎಂದು ದೇಶದ್ರೋಹ ಪ್ರಕರಣ ಎದುರಿಸಿದ್ದ ಕನ್ಹಯ್ಯ ಕುಮಾರ್ ಜೊತೆ ಉಮರ್ ಖಾಲಿದ್, ಅನಿರ್ಬನ್ ಭಟ್ಟಾಚಾರ್ಯ ಬಂಧಿತರಾಗಿದ್ದರು. ಬಳಿಕ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಘಟನೆಯ ಆಧಾರದಲ್ಲಿ ಇವರ ವಿರುದ್ಧ ಕ್ರಮ ಕೈಗೊಂಡಿದ್ದ ಜೆ ಎನ್ ಯು ಆಡಳಿತ ಉಮರ್ ಖಾಲಿದ್ ರನ್ನು ವಿವಿಯಿಂದ ವಜಾ ಮಾಡಿತ್ತು ಮತ್ತು ಅವರ ಡಾಕ್ಟರೇಟ್ ಪ್ರಬಂಧವನ್ನು ಸ್ವೀಕರಿಸಲು ತಿರಸ್ಕರಿಸಿತ್ತು. ಬಳಿಕ ದಿಲ್ಲಿ ಹೈಕೋರ್ಟ್ ತೀರ್ಪಿನ ಬಳಿಕ ವಿವಿ ಪ್ರಬಂಧವನ್ನು ಸ್ವೀಕರಿಸಿತ್ತು. 

ಕನ್ಹಯ್ಯ, ಉಮರ್ ಹಾಗು ಜೆ ಎನ್ ಯು ನ ಇನ್ನೊಬ್ಬ ವಿದ್ಯಾರ್ಥಿ ನಾಯಕಿ ಶೆಹ್ಲಾ - ಈ ಮೂವರು ದೇಶಾದ್ಯಂತ ಮೋದಿ ಹಾಗು ಅವರ ಸರಕಾರದ ವಿರುದ್ಧ ಭಾಷಣಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದರು. ಹಾಗಾಗಿ ಸಂಘ ಪರಿವಾರ ಇವರನ್ನು ದೇಶದ್ರೋಹಿಗಳು, ತೆರಿಗೆದಾರರ ಹಣದಿಂದ ವಿವಿಯಲ್ಲಿ ಮಜಾ ಮಾಡುತ್ತಿರುವವರು ಎಂದು ಬಣ್ಣಿಸುತ್ತಿತ್ತು. 

ಕೆಲವೇ ಸಮಯದ ಹಿಂದೆ ಡಾಕ್ಟರೇಟ್ ಪದವಿ ಪಡೆದ ಕನ್ಹಯ್ಯ ಬೇಗುಸರಾಯ್ ನಲ್ಲಿ ಸಿಪಿಐ ಅಭ್ಯರ್ಥಿಯಾಗಿ ಲೋಕಸಭೆಗೆ ಸ್ಪರ್ಧಿಸಿದ್ದಾರೆ. ಈಗ ಉಮರ್ ಖಾಲಿದ್ ಡಾಕ್ಟರೇಟ್ ಪದವಿ ಪಡೆದಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News