ಜೂನ್ 4ರಂದು ಕೇರಳಕ್ಕೆ ಮುಂಗಾರು ಆಗಮನ: ಸ್ಕೈಮೆಟ್

Update: 2019-05-14 17:47 GMT

ತಿರುವನಂತಪುರಂ,ಮೇ.14: ಜೂನ್ 4ರಂದು ಮುಂಗಾರು ಕೇರಳದ ದಕ್ಷಿಣ ಕರಾವಳಿಗೆ ಆಗಮಿಸಲಿದ್ದು 2019ರಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ದೇಶದ ಏಕೈಕ ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆ ಸ್ಕೈಮೆಟ್ ಮಂಗಳವಾರ ತಿಳಿಸಿದೆ.

ಸ್ಕೈಮೆಟ್ ಮುಂಗಾರು ಮುನ್ಸೂಚನೆ ನಿಜವಾದರೆ ದೇಶದ ಕೃಷಿ ಮತ್ತು ಆರ್ಥಿಕ ಪ್ರಗತಿಯ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ. ಸಾಮಾನ್ಯವಾಗಿ ಜೂನ್ 1 ಸುಮಾರಿಗೆ ಮುಂಗಾರು ಕೇರಳ ಪ್ರವೇಶಿಸುತ್ತದೆ ಮತ್ತು ಜುಲೈ ಮಧ್ಯದ ವೇಳೆಗೆ ಇಡೀ ದೇಶವನ್ನು ವ್ಯಾಪಿಸುತ್ತದೆ. ಸೂಕ್ತ ಸಮಯಕ್ಕೆ ಬೀಳುವ ಮಳೆಯಿಂದ ಅಕ್ಕಿ, ಸೋಯಾಬೀನ್ ಮತ್ತು ಹತ್ತಿ ಬೆಳೆಯಲು ಸುಲಭವಾಗುತ್ತದೆ. ಮುಂಗಾರು ಅವಧಿಯಲ್ಲಿ ಭಾರತದಲ್ಲಿ ವಾರ್ಷಿಕ ಶೇ.70 ಮಳೆಯಾಗುತ್ತಿದ್ದು ಏಶ್ಯದ ಮೂರನೇ ಅತಿದೊಡ್ಡ ಆರ್ಥಿಕತೆಯಲ್ಲಿ ಕೃಷಿ ಕ್ಷೇತ್ರದ ಯಶಸ್ವಿಗೆ ಬಹುಮುಖ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News