ಭಾರತದಲ್ಲಿ ಕಡಿಮೆಯಾಗುತ್ತಿರುವ ಎಟಿಎಂ ಸಂಖ್ಯೆ

Update: 2019-05-15 17:37 GMT

  ಹೊಸದಿಲ್ಲಿ,ಮೇ 15: ಹೆಚ್ಚಿನ ಜನರು ಇಂದಿಗೂ ನಗದು ಹಣದ ವ್ಯವಹಾರವನ್ನೇ ನೆಚ್ಚಿಕೊಂಡಿದ್ದಾರೆ,ಆದರೆ ಹಣವನ್ನು ಹಿಂಪಡೆಯಲು ಎಟಿಎಂ‌ಗಳನ್ನು ಹುಡುಕುವುದೇ ಕಷ್ಟವಾಗಿಬಿಟ್ಟಿದೆ. ಕಠಿಣ ನಿಯಮಾವಳಿಗಳಿಂದಾಗಿ ಎಟಿಎಂ‌ಗಳ ನಿರ್ವಹಣೆ ವೆಚ್ಚ ದಿನೇದಿನೇ ಏರುತ್ತಿರುವುದರಿಂದ ದೇಶದಲ್ಲಿಂದು ಅವು ಒಂದೊಂದಾಗಿ ಬಾಗಿಲೆಳೆದುಕೊಳ್ಳುತ್ತಿವೆ.

ಕಳೆದ ಎರಡು ವರ್ಷಗಳಲ್ಲಿ ವಹಿವಾಟುಗಳು ಹೆಚ್ಚಾಗಿದ್ದರೂ ಎಟಿಎಂ‌ಗಳ ಸಂಖ್ಯೆ ಕಡಿಮೆಯಾಗುತ್ತಲೇ ಇದೆ ಎಂದು ಇತ್ತೀಚಿಗೆ ಆರ್‌ಬಿಐ ಬಿಡುಗಡೆಗೊಳಿಸಿರುವ ಅಂಕಿಅಂಶಗಳು ಬೆಟ್ಟು ಮಾಡಿವೆ. ಭಾರತವು ಈಗಾಗಲೇ ಬ್ರಿಕ್ಸ್ ದೇಶಗಳ ಪೈಕಿ ಪ್ರತಿ ಒಂದು ಲಕ್ಷ ಜನರಿಗೆ ಅತಿ ಕಡಿಮೆ ಎಟಿಎಂ‌ಗಳನ್ನು ಹೊಂದಿದೆ ಎಂದು ಐಎಂಎಫ್ ಹೇಳಿದೆ.

ಆರ್‌ಬಿಐ ಸುರಕ್ಷತೆಯನ್ನು ಹೆಚ್ಚಿಸುವ ಕ್ರಮವಾಗಿ ಸಾಫ್ಟ್‌ವೇರ್ ಮತ್ತು ಉಪಕರಣಗಳನ್ನು ಮೇಲ್ದರ್ಜೆಗೇರಿಸುವುದನ್ನು ಕಳೆದ ವರ್ಷ ಕಡ್ಡಾಯಗೊಳಿಸಿದ ಬಳಿಕ ಇದಕ್ಕಾಗಿ ತಗುಲುವ ವೆಚ್ಚವನ್ನು ಭರಿಸಲು ಬ್ಯಾಂಕುಗಳು ಮತ್ತು ಎಟಿಎಂ ನಿರ್ವಾಹಕರು ಹೆಣಗಾಡುತ್ತಿರುವುದರಿಂದ ಎಟಿಎಮ್‌ಗಳ ಕುಸಿತ ಮುಂದುವರಿಯಬಹುದು.

ಎಟಿಎಂಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಹೆಚ್ಚಿನ ಜನರ ಮೇಲೆ,ಮೇಲೆ ವಿಶೇಷವಾಗಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದವರ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ ಎನ್ನುತ್ತಾರೆ ತಜ್ಞ್ಞರು.

 ಭದ್ರತಾ ವೆಚ್ಚಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಟಿಎಂ ನಿರ್ವಾಹಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರು ಆದಾಯಕ್ಕಾಗಿ ನೆಚ್ಚಿಕೊಂಡಿರುವ ಶುಲ್ಕಗಳು ಕೆಳಮಟ್ಟದಲ್ಲಿಯೇ ಉಳಿದುಕೊಂಡಿವೆ ಮತ್ತು ಉದ್ಯಮ ಸಮಿತಿಯೊಂದರ ಒಪ್ಪಿಗೆಯಿಲ್ಲದೆ ಶುಲ್ಕಗಳನ್ನು ಹೆಚ್ಚಿಸುವಂತಿಲ್ಲ. ಬ್ಯಾಂಕ್ ಮತ್ತು ಥರ್ಡ್ ಪಾರ್ಟಿ ಸೇರಿದಂತೆ ಎಟಿಎಂ ನಿರ್ವಾಹಕರು ಗ್ರಾಹಕರಿಗೆ 15 ರೂ.ಅಂತರ ವಿನಿಮಯ ಶುಲ್ಕವನ್ನು ವಿಧಿಸುತ್ತಾರೆ. ಈ ಶುಲ್ಕ ಕಡಿಮೆಯಿರುವುದೇ ಎಟಿಎಮ್‌ಗಳ ಸಂಖ್ಯೆ ಕುಗ್ಗಲು ಕಾರಣವೆನ್ನುತ್ತಾತರೆ ಆರ್‌ಬಿಐ ಮಾಜಿ ಡೆಪ್ಯುಟಿ ಗವರ್ನರ್ ಆರ್.ಗಾಂಧಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News