ಇನ್‌ಸ್ಟಾಗ್ರಾಮ್‌ನಲ್ಲಿ ಸಮೀಕ್ಷೆ ನಡೆಸಿ ಆತ್ಮಹತ್ಯೆ ಮಾಡಿಕೊಂಡ ಬಾಲಕಿ!

Update: 2019-05-15 17:44 GMT

ಕೌಲಾಲಂಪುರ, ಮೇ 15: ತಾನು ಆತ್ಮಹತ್ಯೆ ಮಾಡಿಕೊಳ್ಳಬೇಕೇ, ಬೇಡವೇ ಎಂಬ ಬಗ್ಗೆ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಸಮೀಕ್ಷೆ ನಡೆಸಿದ ಬಳಿಕ, ಹದಿ ಹರೆಯದ ಬಾಲಕಿಯೊಬ್ಬಳು ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಮಲೇಶ್ಯದಿಂದ ವರದಿಯಾಗಿದೆ.

ಪೂರ್ವ ಮಲೇಶ್ಯದ ಸರವಕ್ ಎಂಬಲ್ಲಿ 16 ವರ್ಷದ ಬಾಲಕಿಯು ಆತ್ಮಹತ್ಯೆ ಮಾಡಿಕೊಳ್ಳುವ ಗಂಟೆಗಳ ಮೊದಲು ತನ್ನ ಇನ್‌ಸ್ಟಾಗ್ರಾಮ್ ಫಾಲೋವರ್‌ಗಳಿಗೆ ಪ್ರಶ್ನೆಯೊಂದನ್ನು ಕೇಳಿದ್ದಳು: ‘‘ತುಂಬಾ ಮಹತ್ವದ ವಿಷಯ: ಡಿ/ಎಲ್ ಆಯ್ಕೆ ಮಾಡಲು ನನಗೆ ಸಹಾಯ ಮಾಡಿ’’. ಬಳಿಕ, ಮೇ 13ರಂದು ಕಟ್ಟಡವೊಂದರ ತುದಿಯಿಂದ ಹಾರಿ ಪ್ರಾಣ ಕಳೆದುಕೊಂಡಳು ಎಂಬುದಾಗಿ ‘ದ ಬಾರ್ನಿಯೊ ಪೋಸ್ಟ್’ ಪತ್ರಿಕೆ ವರದಿ ಮಾಡಿದೆ.

‘‘ ‘ಡಿ/ಎಲ್’ ಎಂದರೆ ‘ಡೆತ್/ಲೈಫ್’ (ಸಾವು/ಬದುಕು) ಎಂಬುದಾಗಿ ಸಂತ್ರಸ್ತೆಯ ಆಪ್ತ ಗೆಳತಿಯೊಬ್ಬಳು ಹೇಳಿದ್ದಾಳೆ’’ ಎಂದು ಪತ್ರಿಕೆ ಹೇಳಿದೆ.

ಸಮೀಕ್ಷೆಯಲ್ಲಿ, ಬಾಲಕಿಯ 69 ಶೇಕಡ ಫಾಲೋವರ್‌ಗಳು ‘ಡಿ’ಯನ್ನು ಆಯ್ಕೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News