6ನೇ ಹಂತದಲ್ಲೇ ಬಿಜೆಪಿ ಬಹುಮತದ ಗೆರೆ ದಾಟಿದೆ: ಅಮಿತ್ ಶಾ

Update: 2019-05-15 17:50 GMT

 ಹೊಸದಿಲ್ಲಿ, ಮೇ 15: ವಿಪಕ್ಷ ಮುಖಂಡರ ಪ್ರಸ್ತಾವಿತ ಸಭೆ ಹಾಗೂ ತೃತೀಯ ರಂಗ ಸ್ಥಾಪಿಸಲು ಟಿಆರ್‌ಎಸ್‌ನಂತಹ ಪ್ರಾದೇಶಿಕ ಪಕ್ಷಗಳ ಪ್ರಯತ್ನದ ಬಗ್ಗೆ ಅಣಕವಾಡಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಇಂತಹ ಸಭೆಗಳು ಚುನಾವಣೆಯಲ್ಲಿ ಬಿಜೆಪಿಯ ಸಾಧನೆಯ ಮೇಲೆ ಯಾವುದೇ ಪರಿಣಾಮ ಬೀರದು ಎಂದಿದ್ದಾರೆ.

ಲೋಕಸಭೆ ಚುನಾವಣೆಯ ಆರನೇ ಹಂತದ ಮತದಾನ ಮುಗಿದಿದ್ದು, ಈಗಲೇ ಬಿಜೆಪಿ ಬಹುಮತದ ಗೆರೆ ದಾಟಿದೆ. 7ನೇ ಹಂತದ ಬಳಿಕ ಪಕ್ಷ 300 ಸ್ಥಾನ ಗೆಲ್ಲುವ ಬಗ್ಗೆ ಪೂರ್ಣ ವಿಶ್ವಾಸವಿದೆ . ಆದ್ದರಿಂದ ಇನ್ನೇನಿದ್ದರೂ ವಿಪಕ್ಷಗಳು ವಿರೋಧ ಪಕ್ಷದ ನಾಯಕನನ್ನು ಆರಿಸಲು ಸಭೆ ನಡೆಸುವುದು ಒಳಿತು . ಆದರೆ ಈ ಬಾರಿಯೂ ವಿಪಕ್ಷ ಮುಖಂಡನ ಸ್ಥಾನ ದೊರಕಲು ಅಗತ್ಯವಾದ ಸ್ಥಾನಗಳನ್ನು ಯಾವುದೇ ವಿಪಕ್ಷ ಪಡೆಯುವುದಿಲ್ಲ ಎಂದು ಶಾ ಹೇಳಿದರು.

ಲೋಕಸಭೆಯಲ್ಲಿ ಸರಳ ಬಹುಮತಕ್ಕೆ 272 ಸ್ಥಾನಗಳ ಅಗತ್ಯವಿದೆ. 2014ರ ಚುನಾವಣೆಯಲ್ಲಿ ಬಿಜೆಪಿ 282 ಸ್ಥಾನ ಗೆದ್ದಿದ್ದರೆ ಪ್ರಧಾನ ಪ್ರತಿಪಕ್ಷವಾದ ಕಾಂಗ್ರೆಸ್ ಕೇವಲ 44 ಸ್ಥಾನ ಗೆದ್ದಿತ್ತು. ಲೋಕಸಭೆಯಲ್ಲಿ ವಿಪಕ್ಷ ನಾಯಕನ ಸ್ಥಾನ ಪಡೆಯಬೇಕಿದ್ದರೆ ಪಕ್ಷವು ಒಟ್ಟು ಸಂಸದೀಯ ಸ್ಥಾನಗಳ ಶೇ.10ರಷ್ಟು ಸ್ಥಾನಗಳನ್ನು ಪಡೆಯಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News