ಕೊಳಕೆ: ಮೇ 19ರಂದು ಎಸೆಸೆಲ್ಸಿ ನಂತರ ಮುಂದೇನು ? ಕಾರ್ಯಾಗಾರ

Update: 2019-05-16 07:40 GMT

ಬಂಟ್ವಾಳ, ಮೇ 16: ಅಲ್ಲಝಿನತುಲ್ ರಿಪಾಯಿಯ್ಯ ದಫ್ ಕಮಿಟಿ ಹಾಗೂ ಸುನ್ನಿ ಸ್ಟೂಡೆಂಟ್ ಫೆಡರೇಶನ್ ಕೊಳಕೆ ಇದರ ಆಶ್ರಯದಲ್ಲಿ ‌"ಎಸೆಸೆಲ್ಸಿ ನಂತರ ಮುಂದೇನು ?" ಎಂಬ ವಿಷಯದ ಕುರಿತು ವಿದ್ಯಾರ್ಥಿಗಳಿಗಾಗಿ ಮಾಹಿತಿ‌ ಕಾರ್ಯಾಗಾರವು ಮೇ 19ರಂದು ಸಂಜೆ 4ಕ್ಕೆ ಕೊಳಕೆ ಸಮುದಾಯ ಭವನದಲ್ಲಿ ನಡೆಯಲಿದೆ.

ಎಆರ್ ಡಿಕೆ ಅಧ್ಯಕ್ಷ ರಹೀಂ ಸಖಾಫಿ ಕೊಳಕೆ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಮತ್ತು ಉಚ್ಚ ನ್ಯಾಯಾಲಯದ ವಕೀಲ ಅಬ್ದುಲ್ ಮಜೀದ್ ಪುತ್ತೂರು, ಬಂಟ್ವಾಳ ನಗರ ಠಾಣೆ ಎಸ್ಸೈ ಚಂದ್ರಶೇಖರ್ ಎಚ್.ವಿ. ಹಾಗೂ ದೇವಮಾತ ಶಾಲೆಯ ಮುಖ್ಯೋಪಾಧ್ಯಾಯ ಫಾದರ್ ದೀಪಕ್ ಡೆಸಾ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುವರು.

ಎಂಜೆಎಂ ಅಧ್ಯಕ್ಷ ಪಿ.ಕೆ.ಅಬೂಬಕರ್, ಮುದರ್ರಿಸ್ ಬದ್ರುದ್ದೀನ್ ಅಹ್ಸನಿ ಅಳಿಕೆ, ಎಸ್ಸೆಸ್ಸೆಫ್ ಬಂಟ್ವಾಳ ಡಿವಿಷನ್ ಅಧ್ಯಕ್ಷ ಅಕ್ಬರ್ ಅಲಿ ಮದನಿ, ಎಸ್ಸೆಸ್ಸೆಫ್ ಪಾಣೆಮಂಗಳೂರು ಸೆಕ್ಟರ್ ಅಧ್ಯಕ್ಷ ಉಸ್ಮಾನ್ ಸಖಾಫಿ ಭಾಗವಹಿಸುವರು ಎಂದು ಎಆರ್ ಡಿಕೆ ಕೊಳಕೆ ಪ್ರಧಾನ ಕಾರ್ಯದರ್ಶಿ ಜಾಫರ್ ಕೊಳಕೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News