​ಡೆಂಗ್ಯೂ ಜ್ವರ ತಡೆಗೆ ಸೊಳ್ಳೆ ನಿಯಂತ್ರಣ ಪ್ರಥಮ ಹೆಜ್ಜೆ : ಡಾ.ರಾಮಕೃಷ್ಣ

Update: 2019-05-16 15:31 GMT

ಮಂಗಳೂರು, ಮೇ 16: ಸೊಳ್ಳೆಗಳ ನಿಯಂತ್ರಣ ಡೆಂಗ್ಯೂ ಜ್ವರ ಬಾರದಂತೆ ತಡೆಯಲು ಇರುವ ಮುನ್ನೆಚ್ಚರಿಕಾ ಪ್ರಥಮ ಮುನ್ನೆಚ್ಚರಿಕಾ ಕ್ರಮ. ಮಳೆಗಾಲದ ಆರಂಭದಲ್ಲಿ ನೀರು ನಿಲ್ಲುವ ಸ್ಥಳಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಗ್ಯೂ ಜ್ವರ ಕಾಣಿಸಿಕೊಳ್ಳತ್ತದೆ ಅದಕ್ಕಾಗಿ ಸೊಳ್ಳೆಗಳ ಉತ್ಪತ್ತಿಯಾಗದಂತೆ ಎಚ್ಚರಿಕೆ ವಹಿಸುವುದು ರೋಗ ನಿಯಂತ್ರಣಕ್ಕೆ ಸೂಕ್ತ ಕ್ರಮವಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2016ರಲ್ಲಿ 485,2017ರಲ್ಲಿ 137,2018ರಲ್ಲಿ 584 2019ರಲ್ಲಿ ಇದುವರೆಗೆ 56 ಡೆಂಗ್ಯೂ ಜ್ವರದ ಪ್ರಕರಣಗಳು ಕಂಡು ಬಂದಿದೆ. ಮಳೆಗಾಲದ ಆರಂಭದಲ್ಲಿ ನೀರು ನಿಲ್ಲುವ ಸ್ಥಳಗಳಲ್ಲಿ ಈ ಜ್ವರ ಕಂಡು ಬರುತ್ತದೆ. ಡೆಂಗ್ಯೂ ವೈರಸ್‌ನಿಂದ ಬರುವ ಜ್ವರವಾಗಿರುವ ಕಾರಣ ಯಾವೂದೇ ನಿರ್ದಿಷ್ಠವಾದ ಔಷಧಿ ಇರುವುದಿಲ್ಲರೋಗ ಲಕ್ಷಣ ಕಂಡು ಬಂದಾಗ ವಿಶ್ರಾಂತಿ, ಲಘು ಉಪಹಾರ ಅಗತ್ಯ.ರಕ್ತ ಸ್ರಾವ,ಹೊಟ್ಟೆ ನೋವು, ವಾಂತಿ ಕಂಡು ಬಂದರೆ ತಕ್ಷಣ ಜಿಲ್ಲಾ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಬೇಕಾಗುತ್ತದೆ. ಜಿಲ್ಲೆಯ ಪ್ರಾಮಿಕ ಆರೋಗ್ಯ ಕೇಂದ್ರಗಳಲ್ಲಿ ಮಲೇರಿಯಾ ಮತ್ತು ಡೆಂಗ್ಯೂ ರೋಗದ ತಡೆಗೆ ಪೂರಕವಾದ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಸಾರ್ವಜನಿಕರು ಈ ನಿಟ್ಟಿನಲ್ಲಿ ಪರಿಸರವನ್ನು ಸ್ವಚ್ಛವಾಗಿಡಲು ,ಸೊಳ್ಳೆ ಉತ್ಪತ್ತಿಯಾಗದಂತೆ ಮಾಡಲು ಸಹಕರಿಸಬೇಕಾದ ಅಗತ್ಯವಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ತಿಳಿಸಿದ್ದಾರೆ.

ಡೆಂಗ್ಯೂ ಜ್ವರದಲ್ಲಿ ಮೂರು ವಿಧಗಳಿವೆ ಇದ್ದಕ್ಕಿದ್ದಂತೆ ಜ್ವರ,ಹಣೆಯ ಮುಂಬಭಾಗದಲ್ಲಿ ನೋವು, ಮಾಂಸ ಖಂಡ, ಕಣ್ಣು ಗುಡ್ಡೆಯಲ್ಲಿ ನೋವು ಪ್ರಥಮ ಡೆಂಗ್ಯೂ ಜ್ವರದ ಲಕ್ಷಣವಾಗಿದೆ. ಎರಡನೆ ವಿಧದದ ಡೆಂಗ್ಯೂ ನಲ್ಲಿ ತೀವ್ರ ಜ್ವರ, ರಕ್ತ ಸ್ರಾವವೂ ಕಂಡುಬಹುದು. ಮೂರನೆ ತರಹದ ಡೆಂಗ್ಯೂ ಜ್ವರದಲ್ಲಿ ರಕ್ತಸ್ರಾವ, ಹೊಟ್ಟೆನೋವು, ವಾಂತಿಯಾದಂತೆ, ಪ್ರಜ್ಞೆ ತಪ್ಪುವ ಸಾಧ್ಯತೆಯೂ ಇದೆ ಎಂದು ರಾಮಕೃಷ್ಣ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News