ಇನ್ನೂ ಬಾರದ ಮಳೆ: ಮಹಾರಾಷ್ಟ್ರದಲ್ಲಿ ಉಲ್ಬಣಗೊಂಡ ಬರಗಾಲ

Update: 2019-05-17 14:51 GMT

ಮುಂಬೈ,ಮೇ.17: ದೇಶಕ್ಕೆ ಮುಂಗಾರು ಆಗಮನ ವಿಳಂಬವಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿರುವ ಮಧ್ಯೆಯೇ ಮಹಾರಾಷ್ಟ್ರದಲ್ಲಿ ಬರಗಾಲ ಸ್ಥಿತಿ ಮತ್ತಷ್ಟು ಉಲ್ಬಣಗೊಂಡಿದೆ. ಮುಂಗಾರು ಇನ್ನೂ ಒಂದು ವಾರ ಕಾಲ ವಿಳಂಬವಾಗಿ ಕೇರಳದ ಕರಾವಳಿ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಅಂದರೆ ಮುಂಗಾರು ಬರಗಾಲಪೀಡಿತ ಮಹಾರಾಷ್ಟ್ರ ತಲುಪಲು ಇನ್ನೂ ಒಂದು ತಿಂಗಳು ಬೇಕಾಗುತ್ತದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಮಹಾರಾಷ್ಟ್ರದ ಒಳನಾಡು ಮತ್ತು ಮರಾಠಾವಾಡ ಪ್ರದೇಶದಲ್ಲಿ ಅತ್ಯಂತ ಕಡಿಮೆ ಮಳೆಯಾಗಲಿದೆ. ಎಲ್ಲವೂ ಹವಾಮಾನ ಪರಿಸ್ಥಿತಿ ಮೇಲೆ ಅವಲಂಬಿತವಾಗಿದೆ. ಹಾಗಾಗಿ ನೀರು ಸಂರಕ್ಷಣೆ ಮಾಡುವುದು ಅತ್ಯಂತ ಅಗತ್ಯ ಎಂದು ಇಲಾಖೆ ಎಚ್ಚರಿಸಿದೆ. ರಾಜ್ಯದ ಜಲಾಶಯಗಳಲ್ಲಿ ಬಹುತೇಕ ಬತ್ತಿಹೋಗಿದ್ದು ಉಳಿದವುಗಳಲ್ಲಿ ಅರ್ಧದಷ್ಟು ಮಾತ್ರ ನೀರಿದೆ. ಹಾಗಾಗಿ ಅರ್ಧಕ್ಕರ್ಧ ರಾಜ್ಯವನ್ನೇ ಬರಗಾಲಪೀಡಿತ ಎಂದು ಸರಕಾರ ಘೋಷಿಸಿದೆ. ಜಲಕ್ಷಾಮ ಅತಿಯಾಗಿರುವ ಕಡೆಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News