ಮಂಗಳೂರು: ಟ್ರಾಫಿಕ್ ಪೊಲೀಸರಿಗೆ ಮಾಸ್ಕ್ ವಿತರಣೆ

Update: 2019-05-17 15:37 GMT

ಮಂಗಳೂರು, ಮೇ 17: ನಗರದಲ್ಲಿ ಸಂಚಾರ ನಿರ್ವಹಣೆಯ ಕರ್ತವ್ಯ ನಿರ್ವಹಿಸುತ್ತಿರುವ ಟ್ರಾಫಿಕ್ ಪೊಲೀಸರಿಗೆ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಮಾಸ್ಕ್ ಒದಗಿಸಿದ ಮಾಸ್ಕನ್ನು ಶುಕ್ರವಾರ ೆನ್ ಇನ್ ಕಾರ್ಯಕ್ರಮದ ವೇಳೆ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಪೊಲೀಸ್ ಸಿಬ್ಬಂದಿಗೆ ವಿತರಿಸಿದರು.

ಪೊಲೀಸ್ ಕೇಂದ್ರ ಕಚೇರಿಯ ಸೂಚನೆ ಮೇರೆಗೆ ಇದನ್ನು ವಿತರಿಸಲಾಗುತ್ತಿದೆ. 1,500 ರೆಸ್ಪಿರೇಟರಿ ಮಾಸ್ಕ್‌ಗಳನ್ನು ಇಲಾಖೆ ಒದಗಿಸಿದೆ. ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯ ಎಲ್ಲಾ ಟ್ರಾಫಿಕ್ ಪೊಲೀಸರಿಗೆ ಇದನ್ನು ನೀಡಲಾಗುವುದು. ಹೊಗೆ, ಧೂಳು ಮತ್ತು ಇತರ ಮಾಲಿನ್ಯಗಳಿಂದ ಪೊಲೀಸರ ಆರೋಗ್ಯದ ಮೇಲೆ ಆಗುತ್ತಿರುವ ಉಸಿರಾಟದ ತೊಂದರೆ ಮತ್ತಿತರ ದುಷ್ಪರಿಣಾಮಗಳಿಂದ ರಕ್ಷಣೆ ಒದಗಿಸುವುದು ಇದರ ಉದ್ದೇಶ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.

ಇಬ್ಬರು ಟ್ರಾಫಿಕ್ ಪೊಲೀಸರಿಗೆ ಸಾಂಕೇತಿಕವಾಗಿ ಮಾಸ್ಕ್ ವಿತರಿಸುವ ಮೂಲಕ ಆಯುಕ್ತರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News