ಮೋದಿಗೆ ಆಶೀರ್ವದಿಸಲು ನಾನು ಯಾರು: ಮುರಳಿ ಮನೋಹರ್ ಜೋಷಿ

Update: 2019-05-19 17:47 GMT

ವಾರಣಾಸಿ, ಮೇ 19: ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಜನರ ಆಶೀರ್ವಾದ ಪಡೆದುಕೊಂಡಿದ್ದಾರೆ. ಆದುದರಿಂದ ಅವರಿಗೆ ಆಶೀರ್ವದಿಸಲು ನಾನು ಯಾರೂ ಅಲ್ಲ ಎಂದು ಬಿಜೆಪಿಯ ಹಿರಿಯ ನಾಯಕ ಮುರಳಿ ಮನೋಹರ್ ಜೋಷಿ ಹೇಳಿದ್ದಾರೆ.

  ನರೇಂದ್ರ ಮೋದಿ ಅವರನ್ನು ವಾರಣಾಸಿಯಲ್ಲಿ ಕಣಕ್ಕಿಳಿಸುವ ಉದ್ದೇಶದಿಂದ 2009ರಲ್ಲಿ ವಾರಣಾಸಿಯಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ಜಯ ಗಳಿಸಿದ್ದ ಜೋಷಿ ಅವರಿಗೆ 2014ರಲ್ಲಿ ಕಾನ್ಪುರದಲ್ಲಿ ಟಿಕೆಟ್ ನೀಡಲಾಗಿತ್ತು. ಆದರೆ 2019ರ ಚುನಾವಣೆಯಲ್ಲಿ ಅವರಿಗೆ ಯಾವುದೇ ಕ್ಷೇತ್ರದಿಂದ ಸ್ಪರ್ಧೆಸಲು ಅವಕಾಶ ಸಿಗಲಿಲ್ಲ.

  ವಾರಣಾಸಿಯಲ್ಲಿ ಮತ ಚಲಾಯಿಸಿ ಜೋಷಿ ಅವರಲ್ಲಿ ಪತ್ರಕರ್ತರು, ‘‘ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಎರಡನೇ ಬಾರಿ ಸ್ಪರ್ಧಿಸುತ್ತಿರುವ ಮೋದಿ ಅವರಿಗೆ ನಿಮ್ಮ ಆಶೀರ್ವಾದ ಇದೆಯೇ ?’’ ಎಂದು ಪ್ರಶ್ನಿಸಿದರು. ಅದಕ್ಕೆ ಜೋಷಿ, “ಮೋದಿ ಅವರಿಗೆ ಜನರ ಆಶೀರ್ವಾದ ಇರುವಾಗ, ಆಶೀರ್ವಾದ ನೀಡಲು ನಾನು ಯಾರು ?” ಎಂದು ಪ್ರಶ್ನಿಸಿದರು.

ಪವಿತ್ರ ನಗರದಲ್ಲಿರುವ ಜನಪ್ರಿಯ ಕಾಶಿ ವಿಶ್ವನಾಥ ಹಾಗೂ ಸಂಕಟ ಮೋಚನ ದೇವಾಲಯಕ್ಕೆ ಅವರು ಭೇಟಿ ನೀಡಿದರು. 1999ರಿಂದ 2004ರ ವರೆಗೆ ಅವರು ಬಿಜೆಪಿ ಅಧ್ಯಕ್ಷ ಹಾಗೂ ಎನ್‌ಡಿಎ ಸರಕಾರದಲ್ಲಿ ಸಚಿವರಾಗಿದ್ದರು.

2014ರ ಲೋಕಸಭಾ ಚುನಾವಣೆಯಲ್ಲಿ ಅವರು ಕಾನ್ಪುರದಿಂದ ಜಯ ಗಳಿಸಿದ್ದರು. ಅಲ್ಲದೆ ಸಂಸದೀಯ ಅಂದಾಜು ಸಮಿತಿಯ ಮುಖ್ಯಸ್ಥರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News