34ನೇ ನೆಕ್ಕಿಲಾಡಿ ಗ್ರಾ.ಪಂ. ಉಪಚುನಾವಣೆ: ಅನಿ ಮಿನೇಜಸ್ - ಪುಷ್ಪಾ ಟಿ.ಆರ್. ಮಧ್ಯೆ ನೇರಾ ಹಣಾಹಣಿ ಸಾಧ್ಯತೆ ?

Update: 2019-05-20 08:15 GMT
ಅನಿ ಮಿನೇಜಸ್ - ಪುಷ್ಪಾ ಟಿ.ಆರ್. 

ಉಪ್ಪಿನಂಗಡಿ: 34 ನೇ ನೆಕ್ಕಿಲಾಡಿ ಗ್ರಾ.ಪಂ.ನಲ್ಲಿ ತೆರವಾಗಿದ್ದ ಒಂದು ಸ್ಥಾನಕ್ಕೆ ಮೇ 29 ರಂದು ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅನಿ ಮಿನೇಜಸ್ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿ ಪುಷ್ಪಾ ಟಿ.ಆರ್. ಅವರ ನಡುವೆ ನೇರ ಹಣಾಹಣಿ ನಡೆಯುವ ಸಾಧ್ಯತೆ ನಿಚ್ಚಳವಾಗಿದೆ.

34ನೇ ನೆಕ್ಕಿಲಾಡಿ ಗ್ರಾ.ಪಂ.ನ ವಾರ್ಡ್ ನಂ. 2 ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಅನಿ ಮಿನೇಜಸ್, ವೀಣಾ ಸಾಲ್ವಿನ್, ಮೈಮುನಾ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಪುಷ್ಪಾ ಟಿ.ಆರ್., ಎ‌.ಸುಜಾತ  ಆರ್ ರೈ ನಾಮಪತ್ರ ಸಲ್ಲಿಸಿದ್ದರು.

ಮೇ 20 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗಳಾದ ವೀಣಾ ಸಾಲ್ವಿನ್, ಮೈಮೂನ ಹಾಗೂ ಎ.  ಸುಜಾತ ಆರ್ ರೈ ನಾಮ ಪತ್ರ ಹಿಂಪಡೆಯಲಿದ್ದಾರೆ ಎಂಬ ಮಾಹಿತ ಪಕ್ಷದ ಮೂಲಗಳಿಂದ ಲಭ್ಯವಾಗಿವೆ. ಅನಿ ಮಿನೇಜಸ್ ಹಾಗೂ ಪುಷ್ಪಾ ಟಿ.ಆರ್. ಅಂತಿಮವಾಗಿ ಸ್ಪರ್ಧಾ ಕಣದಲ್ಲಿ ಉಳಿಯಲಿದ್ದಾರೆ. ಇವರ ನಡುವೆ ನೇರಾ ಹಣಾಹಣಿ ನಡೆಯಲಿದೆ. ಈ ಬಗ್ಗೆ ಅಧಿಕೃತ ಪ್ರಕಟನೆ ಚುನಾವಣಾಧಿಕಾರಿ ಅಪರಾಹ್ನ 3 ಗಂಟೆಯ ಬಳಿಕ ಪ್ರಕಟಿಸಲಿದ್ದಾರೆ.

ಕೃಷಿಕ ಕುಟುಂಬದ ಅನಿ ಮಿನೇಜಸ್ "ನಮ್ಮೂರು - ನೆಕ್ಕಿಲಾಡಿ" ಕಾರ್ಯದರ್ಶಿ ಯಾಗಿದ್ದುಕೊಂಡು ವಿವಿಧ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು, ಪುಷ್ಪಾ ಟಿ.ಆರ್. ಗೃಹಿಣಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News