ಕಾರ್ಕಳ: ನೀರಿನ ಮಿತ ಬಳಕೆಗೆ ಸೂಚನೆ

Update: 2019-05-20 15:03 GMT

ಉಡುಪಿ, ಮೇ 20: ಕಾರ್ಕಳಕ್ಕೆ ಕುಡಿಯುವ ನೀರಿನ ಮೂಲವಾದ ಮಂಡ್ಲಿ ನದಿಯು ಸಂಪೂರ್ಣವಾಗಿ ಬತ್ತಿ ಹೋಗಿರುವುದರಿಂದ ರಾಮ ಸಮುದ್ರದಿಂದ ನೀರು ಮೇಲಕ್ಕೆತ್ತಿ ಶುದ್ಧೀಕರಿಸಿ ಪೂರೈಸುತ್ತಿದ್ದು, ಪ್ರಸ್ತುತ ರಾಮಸಮುದ್ರದಲ್ಲಿ ಕೂಡಾ ಅಂದಾಜು ಸುಮಾರು 20 ದಶಲಕ್ಷ ಲೀಟರ್‌ನಷ್ಟು ನೀರು ಮಾತ್ರ ಸಂಗ್ರಹವಿರುವುದರಿಂದ ಮೇ 25ರವರೆಗೆ ಈಗ ಪೂರೈಸುತ್ತಿರುವಂತೆ 2 ದಿನಗಳಿಗೊಮ್ಮೆ ಪೂರೈಸಲಾಗುವುದು. ಮಳೆ ಬಾರದೇ ಇದ್ದಲ್ಲಿ ಅಂದಿನಿಂದ (ಮೇ 25ರಿಂದ) 3 ದಿನಗಳಿಗೊಮ್ಮೆ ಪೂರೈಸಲಾಗುವುದು.

ಆದ್ದರಿಂದ ತಗ್ಗು ಪ್ರದೇಶದಲ್ಲಿರುವ ನೀರಿನ ಬಳಕೆದಾರರು ನೀರಿನ ಬಳಕೆ ಮಿತಗೊಳಿಸಿ, ಎತ್ತರ ಪ್ರದೇಶಕ್ಕೆ ಸರಬರಾಜು ಆಗುವಂತೆ ಸಹಕರಿಸುವಂತೆ ಮತ್ತು ಗಿಡಮರಗಳಿಗೆ ನೀರನ್ನು ಹಾಕದೇ ಕುಡಿಯುವ ನೀರಿಗೆ ಮತ್ತು ಮಾನವ ಬಳಕೆಗೆ ಮಾತ್ರ ಉಪಯೋಗಿಸುವಂತೆ ಹಾಗೂ ಸಾರ್ವಜನಿಕರು ನೀರನ್ನು ಮಿತ ವಾಗಿ ಬಳಸಿ ಪುರಸಭೆಯೊಂದಿಗೆ ಸಹಕರಿಸುವಂತೆ ಕಾರ್ಕಳ ಪುರಸಬೆ ಮುಖ್ಯಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News