ಡಿಪ್ಲೋಮ, ಪೋಸ್ಟ್ ಡಿಪ್ಲೋಮ ಪ್ರವೇಶಕ್ಕೆ ಅರ್ಜಿ ಆಹ್ವಾನ

Update: 2019-05-20 15:06 GMT

ಉಡುಪಿ, ಮೇ 20: ಮೈಸೂರಿನ ಕೇಂದ್ರೀಯ ಪ್ಲಾಸ್ಟಿಕ್ ತಂತ್ರಜ್ಞಾನ ಸಂಸ್ಥೆ ಸಿಪೆಟ್ (ಕೌಶಲ್ಯ ಮತ್ತು ತಾಂತ್ರಿಕ ತರಬೇತಿ ಕೇಂದ್ರ) ಸಂಸ್ಥೆಯು ಭಾರತ ಸರಕಾರದ ರಸಾಯನ, ಪೆಟ್ರೋರಸಾಯನ ಮತ್ತು ರಸಗೊಬ್ಬರ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾಗಿದ್ದು, ಇದು ದೇಶದ ಪ್ಲಾಸ್ಟಿಕ್ ಕೈಗಾರಿಕಾ ವಲಯಕ್ಕೆ ಬೇಕಾದ ಮಾನವ ಸಂಪನ್ಮೂಲಕ್ಕೆ ಶೈಕ್ಷಣಿಕ ತರಬೇತಿ ನೀಡುತ್ತಿದೆ.

ಸಂಸ್ಥೆಯ 2019-20ನೇ ಸಾಲಿನ ಡಿಪ್ಲೋಮ ಮತ್ತು ಪೋಸ್ಟ್ ಡಿಪ್ಲೋಮ ಪ್ರವೇಶಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿ ಸಲು ಜೂನ್ 30 ಕೊನೆಯ ದಿನವಾಗಿದೆ.

ಸಂಸ್ಥೆಯ 2019-20ನೇ ಸಾಲಿನ ಡಿಪ್ಲೋಮ ಮತ್ತು ಪೋಸ್ಟ್ ಡಿಪ್ಲೋಮ ಪ್ರವೇಶಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜೂನ್ 30 ಕೊನೆಯ ದಿನವಾಗಿದೆ. ಡಿಪ್ಲೋಮ ಇನ್ ಪ್ಲಾಸ್ಟಿಕ್ಸ್ ಟೆಕ್ನಾಲಜಿ-3 ವರ್ಷ, ಡಿಪ್ಲೋಮ ಇನ್ ಪ್ಲಾಸ್ಟಿಕ್ಸ್ ವೌಲ್ಡ್ ಟೆಕ್ನಾಲಜಿ-3 ವರ್ಷ ಮತ್ತು ಪೋಸ್ಟ್ ಗ್ರಾಜುಯೇಟ್ ಡಿಪ್ಲೋಮ ಇನ್ ಪ್ಲಾಸ್ಟಿಕ್ಸ್ ಪ್ರೊಸೆಸಿಂಗ್ ಟೆಸ್ಟಿಂಗ್- ಒಂದುವರೆ ವರ್ಷದ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಸಿಪೆಟ್ ಸಂಸ್ಥೆಯ ನಿರ್ದೇಶಕ ಮತ್ತು ಮುಖ್ಯಸ್ಥ ಆರ್.ಟಿ.ನಾಗರಳ್ಳಿ ತಿಳಿಸಿದ್ದಾರೆ.

ಎಸೆಸೆಲ್ಸಿ, ಪಿಯುಸಿ(ವಿಜ್ಞಾನ) ಮತ್ತು ಬಿಎಸ್‌ಸಿ (ರಸಾಯನ) ಪರೀಕ್ಷೆಯಲ್ಲಿ ತೇರ್ಗಡೆಯಾದವರು ಇದಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ -http://eadmission.cipet.gov.in-ಅಥವಾ ದೂರವಾಣಿ ಸಂಖ್ಯೆ: 0821- 2510618/9480253024/9632688884ನ್ನು ಸಂಪರ್ಕಿಸುವಂತೆ ಸಿಪೆಟ್ ನ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News