ಸದ್ಭಾವನಾ ಸೇವಾ ಟ್ರಸ್ಟ್‌ ವತಿಯಿಂದ ಆವೆಮಣ್ಣಿನ ಕಲಾಕೃತಿ ಶಿಬಿರ

Update: 2019-05-20 15:10 GMT

ಉಡುಪಿ, ಮೇ 20: ಶೃಂಗೇರಿಯ ಸದ್ಭಾವನಾ ಸೇವಾ ಟ್ರಸ್ಟ್‌ನ ಉಡುಪಿ ವಲಯದ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಆವೆಮಣ್ಣಿನ ಕಲಾವಿದ ವೆಂಕಿ ಫಲಿಮಾರ್ ಅವರ ಒಂದು ದಿನದ ಕ್ಲೇ ಮಾಡೆಲಿಂಗ್ (ಆವೆಮಣ್ಣಿನ ಕಲಾಕೃತಿಗಳ ರಚನೆ) ಶಿಬಿರವು ರವಿವಾರ ನಗರದತೆಂಕುಪೇಟೆಯಲ್ಲಿರುವ ಸಂಸ್ಕೃತ ಭಾರತಿ ಕಾರ್ಯಾಲಯದ ಸಭಾಂಗಣದಲ್ಲಿ ನಡೆಯಿತು.

ವೆಂಕಿ ಫಲಿಮಾರ್ ಭಾರತೀಯ ಸಂಸ್ಕೃತಿ ಹಾಗೂ ಜಾನಪದ ಲೋಕಕ್ಕೆ ಸಂಬಂಧಿಸಿದ ಕಲಾಕೃತಿಗಳ ರಚನೆಗೆ ಒತ್ತುಕೊಟ್ಟು ತರಬೇತಿ ನೀಡಿದರು. ಚಿಕ್ಕಮಕ್ಕಳಿಗೆ ಅವರ ವಯಸ್ಸು ಮತ್ತು ಆಸಕ್ತಿಗನುಗುಣವಾಗಿ ಕಲಾಕೃತಿಗಳನ್ನು ರಚಿಸುವುದನ್ನು ಹೇಳಿಕೊಟ್ಟರು. ಕಲಾಕೃತಿಗಳನ್ನು ರಚಿಸುವುದಕ್ಕೆ ಆವೆಮಣ್ಣನ್ನು ಸಿದ್ದಪಡಿಸುವುದು, ಅರ್ಥಪೂರ್ಣವಾಗಿ ಕಲಾಕೃತಿಗಳಲ್ಲಿ ಭಾವನೆಗಳನ್ನು ಅಭಿವ್ಯಕ್ತಿಗೊಳಿಸುವುದನ್ನು ಸಹ ಪ್ರಾತ್ಯಕ್ಷಿಕೆಯ ರೂಪದಲ್ಲಿ ತೋರಿಸಿದರು.

ಟಸ್ಟ್‌ನ ಸ್ಥಾಪಕಾಧ್ಯಕ್ಷ ಸತೀಶ್ ಗುರೂಜಿ ಮಾತನಾಡಿ, ಆವೆಮಣ್ಣಿನಲ್ಲಿ ಆಡು ವುದರಿಂದ ಮಕ್ಕಳಲ್ಲಿ ಮಾನಸಿಕ ಮಾತ್ರವಲ್ಲ ದೈಹಿಕ ಆರೋಗ್ಯವೂ ವೃದ್ಧಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಶಿಬಿರವನ್ನು ಆಯೋಜಿಸಲಾಗಿದೆ ಎಂದರು.

ಶಿಬಿರದಲ್ಲಿ 5ರಿಂದ 60 ವರ್ಷ ವಯಸ್ಸಿನ ಸುಮಾರು 40 ಶಿಬಿರಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ವೆಂಕಿ ಪಲಿಮಾರು ಅವರನ್ನು ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.

ಟ್ರಸ್ಚ್‌ನ ಉಡುಪಿ ವಲಯ ವಿಶ್ವಸ್ಥರಾದ ಗಾಯತ್ರಿ ನಾಯಕ್, ಸದಸ್ಯರಾದ ಸ್ವಾತಿ ಕಾಮತ್ ಹಾಗೂ ಸುಖಿತಾ ಸುವರ್ಣ ಅವರು ಶಿಬಿರವನ್ನು ಸಂಯೋಜಿ ಸಿದರು. ಪಿ. ಜಗದೀಶ್ ನಾಯಕ್ ಸ್ವಾಗತಿಸಿ, ಕಲಾವಿದರನ್ನು ಪರಿಚಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News