ಉಡುಪಿ ಅಗ್ನಿಶಾಮಕ ಠಾಣೆಗೆ ನೀರೆತ್ತುವ ಪಂಪ್ ಕೊಡುಗೆ

Update: 2019-05-20 15:17 GMT

ಉಡುಪಿ ಮೇ 19: ಉಡುಪಿ ಜಿಲ್ಲಾ ನಾಗರಿಕ ಸಮಿತಿ, ಲೋಕೋಪಯೋಗಿ ಇಲಾಖೆ ವತಿಯಿಂದ ಉಡುಪಿ ಅಗ್ನಿಶಾಮಕ ಠಾಣೆಗೆ ನೀರೆತ್ತುವ ಪಂಪ್‌ನ್ನು ಕೊಡುಗೆಯಾಗಿ ನೀಡಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸಮಾಜ ಸೇವಕ, ಉದ್ಯಮಿ ಕೃಷ್ಣಮೂರ್ತಿ ಆಚಾರ್ಯ ಮಾತನಾಡಿ, ಅಗ್ನಿ ಶಾಮಕದ ದಳದ ಬೇಡಿಕೆಗೆ ನಾಗರೀಕ ಸಮಿತಿ ಈ ಹಿಂದೆಯೂ ಸ್ಪಂದಿಸುತ್ತ ಬಂದಿದೆ. ಅಗ್ನಿಶಾಮಕ ದಳ ಕೆಲವೊಂದು ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದೆ. ಇದಕ್ಕೆ ಸ್ಪಂದಿಸಲಾಗುವುದು ಎಂದು ಭರವಸೆ ನೀಡಿದರು.

ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಮಾತನಾಡಿ, ತುರ್ತು ಸಂದರ್ಭದಲ್ಲಿ ಕಾರ್ಯನಿರ್ವಹಿಸಲು ಅಗ್ನಿ ಶಾಮಕ ದಳಕ್ಕೆ ಸಾಕಷ್ಟು ನೀರಿನ ವ್ಯವಸ್ಥೆಗಳು ಬೇಕಾಗುತ್ತವೆ. ಅಗ್ನಿ ಶಾಮಕದಳ ಬಾವಿ ಯಲ್ಲಿ ನೀರಿದ್ದರೂ ಅ ನೀರನ್ನು ಲಿಪ್ಟ್ ಮಾಡಲು ಪಂಪ್ ವ್ಯವಸ್ಥೆ ಇರಲಿಲ್ಲ. ಈ ಬಗ್ಗೆ ಅಧಿಕಾರಿಗಳ ಮನವಿಯಂತೆ ಪಂಪ್ ಸೆಟ ್ ವ್ಯವಸ್ಥೆ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಅಗ್ನಿಶಾಮಕದಳದ ಅಧಿಕಾರಿ ಎಚ್.ಎಂ.ವಸಂತ್ ಕುಮಾರ್, ಠಾಣಾಧಿಕಾರಿ ಪಿ.ಗೋಪಾಲ್, ಮುಖ್ಯ ಅಗ್ನಿಶಾಮ ಕಾಧಿಕಾರಿ ಎ.ಎಲ್.ನಾಯ್ಕ್, ನಿಜಗುಣ, ಸೂರ್ಯ ಪ್ರಕಾಶ್, ಅಗ್ನಿಶಾಮಕದ ದಳದ ಸಿಬ್ಬಂದಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News