ಎಸ್‌ವೈಎಸ್‌ಯಿಂದ ಇಫ್ತಾರ್ ಕೂಟ

Update: 2019-05-20 15:19 GMT

ಕಾಪು, ಮೇ 20: ಎಸ್‌ವೈಎಸ್ ಉಚ್ಚಿಲ ಘಟಕದ ಆಶ್ರಯದಲ್ಲಿ ಇಫ್ತಾರ್ ಕೂಟವನ್ನು ಉಚ್ಚಿಲ ಸೈಯ್ಯದ್ ಅರಬಿ ಜುಮಾ ಮಸೀದಿ ಸಭಾಂಗಣದಲ್ಲಿ ಮೇ 19ರಂದು ಆಯೋಜಿಸಲಾಗಿತ್ತು.

ಎಸ್‌ವೈಎಸ್ ಉಚ್ಚಿಲ ಘಟಕಾಧ್ಯಕ್ಷ ಹಾಜಿ ಅಬ್ದುಲ್ ಹಮೀದ್ ಅಧ್ಯಕ್ಷತೆ ವಹಿಸಿದ್ದರು. ಮಸೀದಿಯ ಖತೀಬ್ ಇಸಾಖ್ ಫೈಝಿ ದುವಾ ನೆರವೇರಿಸಿ ದರು. ಮುಖ್ಯ ಅತಿಥಿಗಳಾಗಿ ಮಸೀದಿಯ ಉಪಾಧ್ಯಕ್ಷ ಉಸ್ಮಾನ್ ಕಟ್ಟಿಂಗೇರಿ, ಪ್ರಧಾನ ಕಾರ್ಯದರ್ಶಿ ಶಬ್ಬೀರ್ ಇಸ್ಮಾಯಿಲ್, ಉದ್ಯಮಿ ಮೊದಿನ ಸೈಯ್ಯದ್, ಇದ್ದಿನಬ್ಬ ತರಿಕೇರಿ, ಇಸ್ಮಾಯಿಲ್ ಬಾವು ಉಪಸ್ಥಿತರಿದ್ದರು.

ಎಸ್‌ವೈಎಸ್ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ದೇಜಾಡಿ ಸ್ವಾಗತಿಸಿದರು. ಮೋನು ರೈಟರ್ ವಂದಿಸಿದರು. ಕೋಶಾಧಿಕಾರಿ ಅಬ್ದುಲ್ ಕರೀಂ ಪೊಲ್ಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News