ನೂತನ ಸರಕಾರಕ್ಕಾಗಿ ಕಾಯುತ್ತಿರುವ ಪ್ರಮುಖ ನೇಮಕಾತಿಗಳು

Update: 2019-05-20 16:35 GMT

ಹೊಸದಿಲ್ಲಿ,ಮೇ 20: ಹಿರಿಯ ಭದ್ರತಾ,ರಕ್ಷಣೆ ಮತ್ತು ಆಡಳಿತಾತ್ಮಕ ಹುದ್ದೆಗಳಿಗೆ ನೇಮಕಾತಿಯು ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿರುವ ನೂತನ ಸರಕಾರವು ಕೈಗೊಳ್ಳಬೇಕಾದ ಮೊದಲ ನಿರ್ಧಾರಗಳಲ್ಲಿ ಸೇರಿದೆ. ಹುದ್ದೆಗಳಲ್ಲಿರುವ ಹಾಲಿ ಅಧಿಕಾರಿಗಳು ಮುಂದಿನ ಕೆಲವೇ ವಾರಗಳಲ್ಲಿ ತಮ್ಮ ಸ್ಥಾನಗಳನ್ನು ತೆರವುಗೊಳಿಸಲಿದ್ದಾರೆ.

ರಾ,ಐಬಿಗಳಿಗೆ ಮುಖ್ಯಸ್ಥರ ಜೊತೆಗೆ ನೂತನ ಸಂಪುಟ ಮತ್ತು ರಕ್ಷಣಾ ಕಾರ್ಯದರ್ಶಿಗಳನ್ನೂ ನೂತನ ಸರಕಾರವು ನೇಮಿಸಲಿದೆ. ಈ ಎಲ್ಲ ನಾಲ್ವರೂ ತಮ್ಮ ಸೇವಾ ವಿಸ್ತರಣೆ ಕೊನೆಗೊಳ್ಳುವುದರೊಂದಿಗೆ ಅಥವಾ ನಿವೃತ್ತಿಯೊಂದಿಗೆ ತಮ್ಮ ಅಧಿಕಾರಾವಧಿಯನ್ನು ಶೀಘ್ರವೇ ಪೂರ್ಣಗೊಳಿಸಲಿದ್ದಾರೆ.

ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥರನ್ನೂ ಸರಕಾರವು ನೇಮಕಗೊಳಿಸಲಿದೆ. ಮೋದಿ ಸರಕಾರವು ಎರಡನೇ ಅಧಿಕಾರಾವಧಿಯನ್ನು ಪಡೆದರೆ ಎಲ್ಲರ ಕಣ್ಣುಗಳು ಈ ನೇಮಕದ ಮೇಲಿರಲಿವೆ. ಮೋದಿ ಸರಕಾರವು ಈ ಮೊದಲು ಜ್ಯೇಷ್ಠತೆಯನ್ನು ಬದಿಗೊತ್ತಿ ಭೂಸೇನೆ ಮತ್ತು ನೌಕಾಪಡೆ ಮುಖ್ಯಸ್ಥರನ್ನು ನೇಮಕಗೊಳಿಸಿತ್ತು. ವಾಯುಪಡೆ ಮುಖ್ಯಸ್ಥರಾಗಿರುವ ಏರ್ ಚೀಫ್ ಮಾರ್ಷಲ್ ಬಿ.ಎಸ್.ಧನೋವಾ ಅವರು ಸೆ.30ರಂದು ನಿವೃತ್ತರಾಗಲಿದ್ದಾರೆ.

ಹಾಲಿ  ಕಾರ್ಯದರ್ಶಿ ಅನಿಲಕುಮಾರ ಧಸ್ಮಾನಾ ಮತ್ತು ಐಬಿ ನಿರ್ದೇಶಕ ರಾಜೀವ ಜೈನ್ ಅವರಿಗೆ ಅವರ ಅಧಿಕಾರಾವಧಿ ಮುಗಿಯಲಿದ್ದ ಕಳೆದ ಡಿಸೆಂಬರ್‌ನಲ್ಲಿ ಆರು ತಿಂಗಳ ಸೇವಾ ವಿಸ್ತರಣೆಯನ್ನು ನೀಡಲಾಗಿತ್ತು.

ಹಾಲಿ ಸಂಪುಟ ಕಾರ್ಯದರ್ಶಿ ಪಿ.ಕೆ.ಸಿನ್ಹಾ ಅವರು ಮೋದಿ ಸರಕಾರದಿಂದ ಎರಡು ವರ್ಷಗಳ ಸೇವಾ ವಿಸ್ತರಣೆಯ ಬಳಿಕ ಜೂ.12ರಂದು ನಿವೃತ್ತರಾಗಲಿದ್ದಾರೆ. ಈ ಪ್ರಮುಖ ಹುದ್ದೆಗೂ ನೂತನ ಸರಕಾರವು ನೇಮಕವನ್ನು ಮಾಡಬೇಕಿದೆ. ಅಲ್ಲದೆ ಹಾಲಿ ರಕ್ಷಣಾ ಕಾರ್ಯದರ್ಶಿ ಸಂಜಯ ಮಿಶ್ರಾ ಅವರು ಮೇ 31ರಂದು ನಿವೃತ್ತರಾಗಲಿರುವುದರಿಂದ ನೂತನ ರಕ್ಷಣಾ ಕಾರ್ಯದರ್ಶಿಯನ್ನೂ ಸರಕಾರವು ನೇಮಿಸಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News