ಇವಿಎಂ ಅಂಕಿಗಳ ಜೊತೆ ಹೊಂದಾಣಿಕೆಯಾಗದಿದ್ದರೆ ಎಲ್ಲ ವಿವಿಪ್ಯಾಟ್‌ಗಳನ್ನು ಎಣಿಸಬೇಕು: ಯಚೂರಿ

Update: 2019-05-20 17:44 GMT

ಹೊಸದಿಲ್ಲಿ, ಮೇ.20: ಮೇ 23ರಂದು ನಡೆಯುವ ಮತ ಎಣಿಕೆ ಸಮಯದಲ್ಲಿ ಇವಿಎಂ ಅಂಕಿಗಳ ಜೊತೆ ವಿವಿಪ್ಯಾಟ್ ಸ್ಲಿಪ್‌ಗಳು ಹೊಂದಾಣಿಕೆಯಾಗದಿದ್ದರೆ ಅಂತಹ ಪರಿಸ್ಥಿತಿಯಲ್ಲಿ ಎಲ್ಲ ವಿವಿಪ್ಯಾಟ್‌ಗಳನ್ನೂ ಎಣಿಕೆ ಮಾಡಬೇಕು ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ ಯಚೂರಿ ಆಗ್ರಹಿಸಿದ್ದಾರೆ.

ಇವಿಎಂ ಅಂಕಿಗಳ ಜೊತೆಗೆ ಶೇ.50 ವಿವಿಪ್ಯಾಟ್ ಸ್ಲಿಪ್‌ಗಳ ಎಣಿಕೆ ಮಾಡುವಂತೆ ಸೂಚನೆ ನೀಡಬೇಕು ಎಂದು ವಿಪಕ್ಷಗಳು ಮಾಡಿದ ಮನವಿಯನ್ನು ಸರ್ವೋಚ್ಚ ನ್ಯಾಯಾಲಯ ತಳ್ಳಿ ಹಾಕಿತ್ತು. ಈ ಹಿನ್ನೆಲೆಯಲ್ಲಿ ಇವಿಎಂ ಅಂಕಿಗಳ ಜೊತೆ ವಿವಿಪ್ಯಾಟ್ ಸ್ಲಿಪ್‌ಗಳು ಹೊಂದಾಣಿಕೆಯಾಗದಿರುವ ಕ್ಷೇತ್ರಗಳಲ್ಲಿ ಮತಗಳನ್ನು ಲೆಕ್ಕ ಹಾಕಲು ಹೊಸ ನಿಯಮವನ್ನು ರೂಪಿಸುವಂತೆ ವಿಪಕ್ಷಗಳು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದವು.

ವಿವಿಪ್ಯಾಟ್ ಮತ್ತು ಇವಿಎಂನಲ್ಲಿ ಮತಗಳ ಪ್ರಮಾಣ ಹೊಂದಾಣಿಕೆಯಾಗದಿದ್ದರೆ ಯಾವ ನಿಯಮ ಅನುಸರಿಸಬೇಕು ಎಂಬ ಬಗ್ಗೆ ಚುನಾವಣಾ ಆಯೋಗ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ.

ಒಂದು ವೇಳೆ, ಇವಿಎಂಗಳಲ್ಲಿ ದಾಖಲಾದ ಮತಗಳು ಮತ್ತು ವಿವಿಪ್ಯಾಟ್‌ನಲ್ಲಿರುವ ಮತಗಳ ಸ್ಲಿಪ್‌ಗಳ ಪ್ರಮಾಣ ಸಮಾನವಾಗಿರದಿದ್ದರೆ ಅಂತಹ ಕ್ಷೇತ್ರಗಳ ಎಲ್ಲ ವಿವಿಪ್ಯಾಟ್‌ಗಳನ್ನು ಲೆಕ್ಕ ಮಾಡಬೇಕು ಲೆಕ್ಕ ಹಾಕಬೇಕು ಎಂದು ಯಚೂರಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News