ಮತದಾನ: ಈ 13 ರಾಜ್ಯಗಳಲ್ಲಿ ಹಕ್ಕು ಚಲಾಯಿಸಿದವರಲ್ಲಿ ಮಹಿಳೆಯರೇ ಅಧಿಕ!

Update: 2019-05-21 03:53 GMT

ಹೊಸದಿಲ್ಲಿ, ಮೇ 21: ರವಿವಾರ ಕೊನೆಗೊಂಡ ಏಳು ಹಂತಗಳ ಮತದಾನದಲ್ಲಿ 13 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಹಿಳಾ ಮತದಾರರು ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿರುವ ಕುತೂಲಹಕಾರಿ ಅಂಶ ಚುನಾವಣಾ ಆಯೋಗದ ಅಂಕಿ ಅಂಶಗಳಿಂದ ತಿಳಿದುಬಂದಿದೆ.

ಈ ಪಟ್ಟಿಗೆ ಸೇರಿರುವ ಉತ್ತರದ ಎರಡು ರಾಜ್ಯಗಳೆಂದರೆ ಬಿಹಾರ ಮತ್ತು ಉತ್ತರಾಖಂಡ. 2014ರಲ್ಲಿ 10 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ನಡೆಸಿದ್ದರು.

ಈ ಬಾರಿ ಕೇರಳ ಅಧಿಕ ಮಹಿಳಾ ಮತಗಳ ಪಟ್ಟಿಯಲ್ಲಿ ಅಗ್ರಸ್ಥಾನಿ. ಇಲ್ಲಿ 97 ಲಕ್ಷ ಪುರುಷರು ಮತ ಚಲಾಯಿಸಿದ್ದರೆ, 106.1 ಲಕ್ಷ ಮಹಿಳೆಯರು ಮತದಾನ ಮಾಡಿದ್ದಾರೆ. ಅಂದರೆ 9.11 ಲಕ್ಷ ಅಧಿಕ ಮಹಿಳೆಯರು ತಮ್ಮ ಹಕ್ಕು ಚಲಾಯಿಸಿದಂತಾಗಿದೆ.

ಉಳಿದಂತೆ ತಮಿಳುನಾಡು, ಆಂಧ್ರಪ್ರದೇಶ, ಬಿಹಾರ, ಮಣಿಪುರ, ಮೇಘಾಲಯ, ಪುದುಚೇರಿ, ಗೋವಾ, ಅರುಣಾಚಲ ಪ್ರದೇಶ, ಉತ್ತರಾಖಂಡ, ಮಿಝೋರಾಂ, ಡಮನ್ ಮತ್ತು ಡಿಯು ಹಾಗೂ ಲಕ್ಷದ್ವೀಪದಲ್ಲಿ ಹೆಚ್ಚಿನ ಮಹಿಳೆಯರು ಮತ ಚಲಾಯಿಸಿದ್ದಾರೆ. ಬಹುತೇಕ ಈಶಾನ್ಯ ರಾಜ್ಯಗಳಲ್ಲಿ ಮಹಿಳೆಯರು ಅಧಿಕ ಮತ ಚಲಾಯಿಸಿದ್ದಾರೆ. ಈ 13 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟಾಗಿ ಪುರುಷರಿಗಿಂತ 21 ಲಕ್ಷ ಮಹಿಳೆಯರು ಅಧಿಕ ಮತ ಚಲಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News