ಮೇ 25ರಂದು ಅಂತಾರಾಷ್ಟ್ರೀಯ ಕೊಂಕಣಿ ಚಲನಚಿತ್ರ ದಿನ

Update: 2019-05-21 07:33 GMT

ಮಂಗಳೂರು, ಮೇ 21: ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ) ಕೊಂಕಣಿ ವಿಭಾಗ ಹಾಗೂ ಮಹಾಮಾಯಿ ಸಿನಿ ಕ್ರಿಯೇಷನ್ಸ್, ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಅಂತರಾಷ್ಟ್ರೀಯ ಕೊಂಕಣಿ ಚಲನಚಿತ್ರ ದಿವಸ್ 2019 ಎನ್ನುವ ಕಾರ್ಯಾಗಾರವನ್ನು ಮೇ 25ರಂದು ಕಾಲೇಜಿನ ಸಾನಿಧ್ಯ ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ಉದ್ಘಾಟನೆಗೊಳ್ಳಲಿದೆ.

 ಕೊಂಕಣಿ ಚಲನಚಿತ್ರ ರಂಗಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿ, 3 ಜನ ಸಾಧಕರಿಗೆ ಜೀವಮಾನ ಪ್ರಶಸ್ತಿಯನ್ನು ನೀಡಲಾಗುವುದು. ಕೊಂಕಣಿ ರಂಗ ಕ್ಷೇತ್ರದ ಸಾಧಕ-ಬಾಧಕಗಳ ಬಗ್ಗೆ ಉಪನ್ಯಾಸ ಚರ್ಚೆ ನಡೆಯಲಿರುವುದು. ವಿಶೇಷ ಆಕರ್ಷಣೆಯಾಗಿ ಅವೈಜಾಸ ಹಾಗೂ ಪ್ಲಾನಿಂಗ್ ದೆವಾಚೆ ಎನ್ನುವ ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದು. ಈ ಪ್ರದರ್ಶನಕ್ಕೆ ಸಾರ್ವಜನಿಕರಿಗೆ ಪ್ರವೇಶ ಉಚಿತವಾಗಿದ್ದು, ಎಲ್ಲಾ ಕೊಂಕಣಿ ಚಿತ್ರ ಪ್ರೇಮಿಗಳಿಗೆ ಇದೊಂದು ಸುವರ್ಣಾವಕಾಶ ಎಂದು ಸಂಘಟಕಿ ಫ್ಲೋರ ಕಾಸ್ತಲಿನೊ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News