ಪಾವೂರು: ಸೌಹಾರ್ದ ಇಫ್ತಾರ್ ಸಂಗಮ

Update: 2019-05-21 11:57 GMT

ಮಂಗಳೂರು, ಮೇ 21: ಪಾವೂರು ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಜಂಟಿ ಆಶ್ರಯದಲ್ಲಿ ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು ನೇತೃತ್ವದಲ್ಲಿ ಪಾವೂರು ಮಲಾರ್ ಜಂಕ್ಷನ್‌ನಲ್ಲಿ ಸೌಹಾರ್ದ ಇಫ್ತಾರ್ ಸಂಗಮವು ಸೋಮವಾರ ಜರುಗಿತು.

ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮಾತನಾಡಿ ಇಸ್ಲಾಂ, ಕ್ರೈಸ್ತ, ಹಿಂದೂ ಧರ್ಮ ಮತ್ತು ಆಯಾ ಧರ್ಮದ ಗ್ರಂಥಗಳನ್ನು ಅರ್ಥ ಮಾಡಿಕೊಂಡವ ಎಂದೂ ಕೂಡ ಅನ್ಯಾಯ ಮಾಡಲಾರ. ಎಲ್ಲಾ ಧರ್ಮವೂ ಅನ್ಯೋನ್ಯತೆಗೆ ಒತ್ತು ನೀಡಿದೆಯೇ ವಿನಃ ಎಂದೂ ಪರಸ್ಪರ ಕಚ್ಚಾಡಲು, ವೈರತ್ವ ಬೆಳೆಸಲು ಪ್ರೋತ್ಸಾಹಿಸುತ್ತಿಲ್ಲ. ಆದರೆ, ಮಾನವರು ತನ್ನ ಸ್ವಾರ್ಥಕ್ಕಾಗಿ ತಪ್ಪು ಹಾದಿ ತುಳಿಯುತ್ತಿದ್ದಾರೆ. ಪವಿತ್ರ ರಮಝಾನ್‌ನ ಸೌಹಾರ್ದ ಇಫ್ತಾರ್ ಸಂಗಮವು ಗ್ರಾಮದ ಸೌಹಾರ್ದಕ್ಕೆ ಪ್ರೇರಣೆಯಾಗಲಿ ಎಂದರು.

ಕಾರ್ಯಕ್ರಮದಲ್ಲಿ ಇಬ್ರಾಹೀಂ ಕೋಡಿಜಾಲ್, ಪ್ರಶಾಂತ್ ಕಾಜವ, ಈಶ್ವರ ಉಳ್ಳಾಲ, ರವೀಂದ್ರ ರೈ ಕಲ್ಲಿಮಾರ್, ಆಲ್ವಿನ್ ಡಿಸೋಜ, ಮಹಾಬಲ ರೈ, ಮೆಲ್ವಿನ್ ಡಿಸೋಜ, ಜಬ್ಬಾರ್ ಬೋಳಿಯಾರ್, ರಫೀಕ್ ಮದಕ, ಶೌಕತ್ ಕೊಣಾಜೆ, ಬಶೀರ್ ಜೋಕಟ್ಟೆ, ಎಂ.ಟಿ.ಫಿರೋಝ್, ಅಚ್ಚುತ ಗಟ್ಟಿ, ಮುಹಮ್ಮದ್ ಶಾಲಿ ಹರೇಕಳ, ತ್ಯಾಗಂ ಹರೇಕಳ, ಸತೀಶ್ ಆಚಾರ್ಯ, ಮಹಾಬಲ ಹೆಗ್ಡೆ ದೆಬ್ಬೇಲಿಗುತ್ತು, ಅಬ್ದುಲ್ ರಹ್ಮಾನ್ ಕೋಡಿಜಾಲ್, ಶಶಿಪ್ರಭಾ, ಲೀಲಾವತಿ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News