ಮೇ 26ರಿಂದ ಜಪಾನ್‌ನಲ್ಲಿ ಯುವ ವಿಜ್ಞಾನ ವಿನಿಮಯ ಕಾರ್ಯಕ್ರಮ: ಮುಹಮ್ಮದ್ ಝಿಯಾನ್ ಆಯ್ಕೆ

Update: 2019-05-21 12:07 GMT

ಮಡಿಕೇರಿ, ಮೇ 21: ಜಪಾನ್‌ನಲ್ಲಿ ಮೇ 26ರಿಂದ ಜೂನ್ 1ರವರೆಗೆ ನಡೆಯಲಿರುವ ಜಪಾನ್ ಏಶ್ಯಾ ಯುವ ವಿಜ್ಞಾನ ವಿನಿಮಯ ಕರ್ಯಕ್ರಮಕ್ಕೆ ಇಲ್ಲಿನ ದುದ್ದಿಯಂಡ ಎಂ.ಮುಹಮ್ಮದ್ ಝಿಯಾನ್ ಆಯ್ಕೆಯಾಗಿದ್ದಾರೆ.

ಈ ಪ್ರತಿಷ್ಠಿತ ಕಾರ್ಯಕ್ರಮಕ್ಕೆ ಆಯ್ಕೆಗೊಂಡ ದೇಶದ ಆಯ್ದ 12 ವಿದ್ಯಾರ್ಥಿಗಳ ಪೈಕಿ ಝಿಯಾನ್ ಒಬ್ಬನಾಗಿದ್ದಾರೆ.
ಮಡಿಕೇರಿಯ ಗಾಳಿಬೀಡಿನಲ್ಲಿರುವ ಕೊಡಗು ಜವಾಹರ್ ನವೋದಯ ವಿದ್ಯಾಲಯದ ದ್ವಿತೀಯ ಪಿಯು ವಿದ್ಯಾರ್ಥಿಯಾಗಿರುವ ಮುಹಮ್ಮದ್ ಝಿಯಾನ್, ಕೆಎಂಎ ಸದಸ್ಯರಾಗಿರುವ ಮತ್ತು ದೇಶದ ಗಡಿ ಭದ್ರತಾ ಪಡೆಯ ತಿರುವನಂತಪುರಂ ಕೇಂದ್ರದಲ್ಲಿ ಕರ್ತವ್ಯದಲ್ಲಿರುವ ಮೂಲತಃ ನಲ್ವತ್ತೋಕ್ಲಿನ ದುದ್ದಿಯಂಡ ಮಜೀದ್ ಅವರ ಪುತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News