ಶಾಲಾ ಕಾಲೇಜು ಒಂದು ವಾರ ತಡವಾಗಿ ಆರಂಭಿಸಲು ಶಾಸಕ ಕಾಮತ್ ಮನವಿ

Update: 2019-05-21 12:53 GMT

ಮಂಗಳೂರು, ಮೇ 21: ನಗರದಲ್ಲಿ ನೀರಿನ ತೀವ್ರ ಕೊರತೆ ಉಂಟಾಗಿರುವುದರಿಂದ ಶಾಲಾ-ಕಾಲೇಜು ಸಹಿತ ಇತರ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ನೀರಿನ ಸಮಸ್ಯೆ ಮತ್ತಷ್ಟು ಕಾಡಲಿದೆ. ಹಾಗಾಗಿ ಒಂದು ವಾರ ತಡವಾಗಿ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲು ಸೂಕ್ತ ಕ್ರಮ ಜರುಗಿಸುವಂತೆ ದ.ಕ.ಜಿಲ್ಲಾಡಳಿತಕ್ಕೆ ಸೂಚನೆ ನೀಡಬೇಕು ಎಂದು ರಾಜ್ಯ ಸರಕಾರಕ್ಕೆ ಶಾಸಕ ವೇದವ್ಯಾಸ ಕಾಮತ್ ಮನವಿ ಮಾಡಿದ್ದಾರೆ.

ಶಿಕ್ಷಣ ಸಂಸ್ಥೆಗಳು ಆರಂಭವಾದೊಡನೆ ಹೊರಜಿಲ್ಲೆಗಳ ವಿದ್ಯಾರ್ಥಿಗಳು ಮಂಗಳೂರಿಗೆ ಬಂದು ಹಾಸ್ಟೆಲ್ಗಳಲ್ಲಿ ನೆಲೆಸುವುದರಿಂದ ಅಲ್ಲಿಯೂ ಸಾಕಷ್ಟು ಅನಾನುಕೂಲತೆಗಳು ಉಂಟಾಗಲಿವೆ. ಜೂನ್ ಒಂದನೇ ತಾರೀಕಿನಿಂದ ಹಿರಿಯ, ಕಿರಿಯ ಪ್ರಾರ್ಥಮಿಕ ಶಾಲೆ, ವಿದ್ಯಾ ಸಂಸ್ಥೆಗಳಲ್ಲಿ ತರಗತಿಗಳು ಪ್ರಾರಂಭವಾಗಲಿದ್ದು, ಮಳೆ ಬಾರದೇ ಇದ್ದರೆ ನೀರಿನ ಸಮಸ್ಯೆ ಇನ್ನು ಹೆಚ್ಚು ತೊಂದರೆಗೆ ಕಾರಣವಾಗಲಿದೆ. ಹೀಗಿರುವಾಗ ತಕ್ಷಣ ಜಿಲ್ಲಾಡಳಿತ ಶಿಕ್ಷಣಾಧಿಕಾರಿಗಳ ಮೂಲಕ ಸುತ್ತೋಲೆಯನ್ನು ಹೊರಡಿಸಿ ಕನಿಷ್ಟ ಒಂದು ವಾರವಾದರೂ ತರಗತಿಗಳನ್ನು ಮುಂದೂಡಬೇಕು ಎಂದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News