ಸಂಗೀತ ಪ್ರೇಮಿಗಳ ಮನಸೆಳೆದ ‘ಕೊಂಕಣಿ ಶ್ರೀರಾಮ ಗೀತಾ’ ಕಾರ್ಯಕ್ರಮ

Update: 2019-05-21 12:55 GMT

ಮಂಗಳೂರು, ಮೇ 21: ಕೊಂಕಣಿ ಭಾಷಾ ಮಂಡಳ ಕರ್ನಾಟಕ ಇದರ ವತಿಯಿಂದ ನಗರದ ಪುರಭವನದಲ್ಲಿ ಸ್ವರಶ್ರೀ ಗೋವಾ ಪ್ರಸ್ತುತ ಪಡಿಸಿದ ರಾಮಾಯಣ ಆಧಾರಿತ ‘ಕೊಂಕಣಿ ಶ್ರೀರಾಮ ಗೀತಾ’ ಸಂಗೀತ ಕಾರ್ಯಕ್ರಮವು ಸಂಗೀತ ಪ್ರೇಮಿಗಳ ಮನಸೆಳೆಯಿತು.

ಕೊಂಕಣಿ ಕವಿ ದಿ. ಮನೋಹರರಾಯ್ ಸರದೇಸಾಯಿ 50 ವರ್ಷಗಳ ಹಿಂದೆ ಗೋವಾ ಓಪಿನಿಯನ್ ಪೋಲನ ಸಂದರ್ಭ ರಚಿಸಿದ ಗೀತೆಗಳಿಗೆ 17 ಕಲಾವಿದರ ತಂಡವಾಗಿರುವ ‘ಸ್ವರಶ್ರೀ ಗೋವಾ’ ಸಂಗೀತ ನೀಡಿ ರಂಜಿಸಿತು.

ಖ್ಯಾತ ಸಿತಾರ ವಾದಕ ಉಸ್ತಾದ ರಪೀಖ್ ಖಾನ್ ಕಾರ್ಯಕ್ರಮ ಉದ್ಘಾಟಿಸಿದರು. ಸ್ವರಶ್ರೀ ಗೋವಾದ ಅಧ್ಯಕ್ಷ ಅಜೀಜ ಲೋಬೊ, ನಂದಗೋಪಾಲ ಶೆಣೈ, ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಬಸ್ತಿ ವಾಮನ ಶೆಣೈ, ಸಿ.ಡಿ. ಕಾಮತ್, ಗೋಕುಲದಾಸ ಪ್ರಭು, ಡಾ. ಕೆ. ಮೋಹನ ಪೈ, ಸ್ವರಶ್ರೀ ನಿರ್ದೇಶಕ ರಮಾನಂದ ರಾಯರ್ಕರ್, ಭಾಷಾ ಮಂಡಳದ ಉಪಾಧ್ಯಕ್ಷ ಎಂ.ಆರ್. ಕಾಮತ, ನಿಕಟ ಪೂರ್ವ ಅಧ್ಯಕ್ಷೆ ಗೀತಾ ಸಿ. ಕಿಣಿ, ಕಾರ್ಯದರ್ಶಿ ರತ್ನಾಕರ ಕುಡ್ವ, ಖಜಾಂಚಿ ವಿಠಲ ಕುಡ್ವ, ಸಂಚಾಲಕ ವಸಂತ ರಾವ್, ಸಂಪರ್ಕ ಕಾರ್ಯದರ್ಶಿ ಸುರೇಶ ಶೆಣೈ, ಸಹ ಕಾರ್ಯದರ್ಶಿ ಜೂಲಿಯೆಟ್ ಫೆರ್ನಾಂಡಿಸ್, ಕಾರ್ಯಕಾರಿ ಸಮಿತಿಯ ಸದಸ್ಯರಾದ ಪೌಲ್ ಮೊರಾಸ್, ದಿನೇಶ ಶೇಟ್, ಪ್ರವೀಣ್ ಕಾಮತ್, ಮೀನಾಕ್ಷಿ ಪೈ ಉಪಸ್ಥಿತರಿದ್ದರು.

ಕೊಂಕಣಿ ಭಾಷಾ ಮಂಡಳದ ಅಧ್ಯಕ್ಷ ವೆಂಕಟೇಶ ಎನ್. ಬಾಳಿಗಾ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News