ಒತ್ತಡ ನಿವಾರಣೆಗೆ ಯೋಗ ಚಟುವಟಿಕೆ ಸಹಕಾರಿ : ಉಮಾ ಪ್ರಶಾಂತ್‌

Update: 2019-05-21 13:02 GMT

ಮಂಗಳೂರು, ಮೇ 21: ಕೆಲಸದ ನಡುವಿನ ಒತ್ತಡ ನಿವಾರಣೆಗೆ ಯೋಗ ಚಟುವಟಿಕೆ ಸಹಕಾರಿ ಎಂದು ಭ್ರಷ್ಟಾಚಾರ ನಿಗ್ರಹ ದಳದ ಎಸ್.ಪಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್ ಕ್ಲಬ್, ಪತ್ರಿಕಾ ಭವನ ಟ್ರಸ್ಟ್ ಆಶ್ರಯದಲ್ಲಿ ಐಸಿರಿ ಹೆಲ್ತ್ ಇಂಡಿಯಾ ಮಿಶನ್‌ ವತಿಯಿಂದ ಒಂದು ತಿಂಗಳ ಕಾಲ ನಡೆಯಲಿರುವ ಯೋಗ ಶಿಬಿರವನ್ನು ಇಂದು ಪತ್ರಿಕಾಭವನದಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು.

ಯಾವೂದೇ ವ್ಯಕ್ತಿ ತನ್ನ ವೃತ್ತಿಯನ್ನು ಸಮರ್ಪಕವಾಗಿ ಮಾಡಬೇಕಾದರೂ ಅತ ತನ್ನ ಆರೋಗ್ಯದ ಬಗ್ಗೆ ಗಮನಹರಿಸುವುದು ಮುಖ್ಯ ಅದಕ್ಕಾಗಿ ಆರೋಗ್ಯ ಭಾಗ್ಯ ಎನ್ನುವುದುನ್ನು ನಮ್ಮ ಹಿರಿಯರು ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೆಲಸದಲ್ಲಿ ಒತ್ತಡ ಸಾಮನ್ಯವಾಗಿದೆ ಈ ಹಿನ್ನೆಲೆಯಲ್ಲಿ ಕೆಲಸಸದ ಒತ್ತಡ ನಿವಾರಣೆಗೆ ಹಾಗೂ ಆರೋಗ್ಯದ ದೃಷ್ಟಿಯಿಂದ ಇಂತಹ ಯೋಗ ಶಿಬಿರಗಳು ಅಗತ್ಯ ಎಂದು ಉಮಾಪ್ರಶಾಂತ್ ತಿಳಿಸಿದ್ದಾರೆ.

ಐಸಿರಿ ಹೆಲ್ತ್ ಇಂಡಿಯಾ ಮಿಶನ್‌ನ ನಿರ್ದೇಶಕ ದರ್ಶನ್ ಜೈನ್ ಯೋಗ ಕಾರ್ಯಕ್ರಮದ ಬಗ್ಗೆ ವಿವರಿಸಿದರು.ಸಮಾರಂಭದ ವೇದಿಕೆಯಲ್ಲಿ ಕಾರ್ಯನಿರತ ಪತ್ರಕರ್ತರ ಸಮಘದ ಅಧ್ಯಕ್ಷ ಶ್ರೀನಿವಾಸನಾಯಕ್ ಇಂದಾಜೆ,ಸಂಘದ ನಿಕಟಪೂರ್ವ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಮೊದಲಾದವರು ಉಪಸ್ಥಿತರಿದ್ದರು.

ಪತ್ರಿಕಾಭವನ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಬಿ.ಎನ್ ಸ್ವಾಗತಿಸಿದರು. ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಆರ್.ಸಿ.ಭಟ್ ಕಾರ್ಯಕ್ರಮ ನಿರೂಪಿಸಿದರು. ಹರೀಶ್ ಮೋಟುಕಾನ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News