ಉಡುಪಿ: ಮರಳು ಸಹಿತ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಧರಣಿ

Update: 2019-05-21 14:08 GMT

ಉಡುಪಿ, ಮೇ 21: ಹೈಕೋರ್ಟ್ ತೀರ್ಪಿನಂತೆ ಕನಿಷ್ಠ ಕೂಲಿ ಜಾರಿ ಗೊಳಿಸಲು ಮತ್ತು ಮರಳು ಸಹಿತ ಉಡುಪಿ ಜಿಲ್ಲೆಯ ಪ್ರಮುಖ ಬೇಡಿಕೆ ಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಿಐಟಿಯು ಉಡುಪಿ ಜಿಲ್ಲಾ ಸಮಿತಿಯು ಮಂಗಳವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿತು.

ಧರಣಿಯನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಸಂಚಾಲಕ ಕೆ. ಶಂಕರ್, ಹೈಕೋರ್ಟ್ ಆದೇಶದಂತೆ ಕನಿಷ್ಠ ಕೂಲಿ ಜಾರಿಗೆ ಕ್ರಮಕೈಗೊಳ್ಳಬೇಕು. ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರನ್ನು ಕನಿಷ್ಠ ಕೂಲಿ ವ್ಯಾಪ್ತಿಗೆ ಒಳಪಡಿಸಬೇಕು. ತಂದೆ ತಾಯಿ ಗಳನ್ನೊಳಗೊಂಡ ಐದು ಘಟಕಗಳ ಆಧಾರದಲ್ಲಿ ಕನಿಷ್ಠ ಕೂಲಿ ನಿಗದಿಗೊಳಿಸಬೇಕು. ಬೆಲೆ ಏರಿಕೆ ಸೂಚ್ಯಂಕ ನಿಗದಿ ಯಲ್ಲಿನ ಮೋಸ ನಿಲ್ಲಿಸಬೇಕು. ಬೀಡಿ ಕಾರ್ಮಿಕರಿಗೆ ಕನಿಷ್ಟ ಕೂಲಿ ತುಟ್ಟಿಭತ್ಯೆ ಬಾಕಿ ಜಾರಿೊಳಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಮರಳು ಸಮಸ್ಯೆ ಗಂಭೀರವಾಗಿದ್ದು, ಕಟ್ಟಡ ಕಾಮಗಾರಿ ಕೆಲಸ ಗಳು ಮರಳು ಇಲ್ಲದೆ ಸ್ಥಗಿತಗೊಂಡಿದೆ. ಇದರಿಂದ ಕಟ್ಟಡ ಕಾರ್ಮಿಕರಿಗೆ ಕೆಲಸ ವಿಲ್ಲವಾಗಿದೆ. ಒಟ್ಟಾರೆ ಇದು ಜಿಲ್ಲೆಯ ಅಭಿವೃದ್ಧಿಗೆ ಅಡ್ಡಿಯಾಗಿದೆ. ಕಾರ್ಮಿಕರ ಹಿತರಕ್ಷಣೆ ಹಾಗೂ ಜಿಲ್ಲೆಯ ಅಭಿವೃದ್ಧಿಗಾಗಿ ತುರ್ತು ಗಮನಹರಿಸಿ ಈ ಸಮಸ್ಯೆ ಯನ್ನು ಇತ್ಯರ್ಥಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

ಪ್ರತಿ ವರ್ಷ ನೀರಿನ ಸಮಸ್ಯೆಗೆ ಒಳಗಾಗಿ, ಜನ ಸಾಮಾನ್ಯರು ಜಿಲ್ಲೆಯ ಹೆಚ್ಚಿನ ಪ್ರದೇಶಗಳಲ್ಲಿ ತೊಂದರೆಗೆ ಒಳಗಾಗಿದ್ದಾರೆ. ಮಳೆ ಆರಂಭ ವಾಗುವ ಮೊದಲು ಹಾಗೂ ಅನಂತರ ನೀರಿನ ಸಂಗ್ರಹಕ್ಕೆ ತುರ್ತು ಕ್ರಮ ವಹಿಸಬೇಕು. ಅದೇ ರೀತಿ ವಿದ್ಯುತ್ ಸಮಸ್ಯೆ ಕೂಡ ಗಂಭೀರವಾಗಿದೆ. ವಿದ್ಯುತ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ತುರ್ು ಕ್ರಮ ವಹಿಸಬೇಕು ಎಂದರು.

ಬಳಿಕ ಈ ಕುರಿತ ಮನವಿಯನ್ನು ಜಿಲ್ಲಾಧಿಕಾರಿ, ಮುಖ್ಯಮಂತ್ರಿ ಹಾಗೂ ಕಾರ್ಮಿಕ ಅಧಿಕಾರಿಗಳಿಗೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಿಐಟಿಯು ಅಧ್ಯಕ್ಷ ಪಿ.ವಿಶ್ವನಾಥ ರೈ, ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಮುಖಂಡರಾದ ವಿಠಲ ಪೂಜಾರಿ, ಶಶಿಧರ ಗೊಲ್ಲ, ಕವಿರಾಜ್, ದಾಸು ಭಂಡಾರಿ, ವೆಂಕಟೇಶ್ ಕೋಣಿ, ಶೇಖರ್ ಬಂಗೇರ, ನಳಿನಿ, ಸುಶೀಲಾ ನಾಡ, ಸುರೇಶ್ ಕಲ್ಲಾಗರ್ ಮೊದಲಾದವರು ಉಪಸ್ಥಿತರಿದ್ದರು.

ಬೋಟು ನಾಪತ್ತೆ ಮಹಾವಂಚನೆ ಪ್ರಕರಣ

ಸುವರ್ಣ ತ್ರಿಭುಜ ಬೋಟು ಸಹಿತ 7 ಮಂದಿ ಮೀನುಗಾರರ ನಾಪತ್ತೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಸರಕಾರ ಒಳಪಡಿಸಬೇಕು. ಇದೊಂದು ಮಹಾ ವಂಚನೆಯ ಪ್ರಕರಣವಾಗಿದೆ. ತಪ್ಪುಮಾಡಿದವರಿಗೆ ಶಿಕ್ಷೆಯಾಗ ಬೇಕಾಗಿದೆ. ಮೀನುಗಾರರಿಗೆ ರಕ್ಷಣೆ ನೀಡುವ ಮಹತ್ತರ ಹೊಣೆ ಜಿಲ್ಲಾಡಳಿತ ಮತ್ತು ಸರಕಾರದ್ದಾಗಿದೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಪಿ.ವಿಶ್ವನಾಥ ರೈ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News