ಬಂಟಕಲ್ ಇಂಜಿನಿಯರಿಂಗ್ ಕಾಲೇಜಿಗೆ ನ್ಯಾಕ್ ಮಾನ್ಯತೆ

Update: 2019-05-21 14:09 GMT

ಶಿರ್ವ, ಮೇ 21: ಬಂಟಕಲ್‌ನ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯಕ್ಕೆ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್ (ನ್ಯಾಕ್) ಕೊಡಮಾಡುವ ಶ್ರೇಯಾಂಕದಲ್ಲಿ ‘ಎ’ ಶ್ರೇಯಾಂಕವನ್ನು ನೀಡಿದೆ.

ಕಾಲೇಜಿನಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹಾಗೂ ಸರ್ವಾಂಗೀಣ ಅಭಿವೃದ್ಧಿ ಕಡೆಗೆ ಗಮನಹರಿಸಿ ಕೈಗೊಳ್ಳುವ ಕಾರ್ಯಚಟುವಟಿಕೆಗಳ ಗುಣ ಮಟ್ಟದ ಆಧಾರದಲ್ಲಿ ಈ ಶ್ರೇಯಾಂಕವು ಲಭಿಸಿದೆ. ಇತ್ತೀಚೆಗೆ ನ್ಯಾಕ್‌ನ ಸದಸ್ಯರು ಕಾಲೇಜಿಗೆ ಭೇಟಿಕೊಟ್ಟು ಇಲ್ಲಿನ ಶೈಕ್ಷಣಿಕ ಚಟುವಟಿಕೆಗಳ ಹಾಗೂ ಇತರ ಸೌಲಭ್ಯಗಳ ಬಗ್ಗೆ ವಿಸ್ತೃತವಾದ ಪರಿಶೀಲನೆ ನಡೆಸಿದ್ದರು.

ಕರ್ನಾಟಕದ 200ಕ್ಕೂ ಅಧಿಕ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೇವಲ 21 ಕಾಲೇಜುಗಳು ಮಾತ್ರ ನ್ಯಾಕ್‌ನ ಎ ಶ್ರೇಯಾಂಕವನ್ನು ಪಡೆದಿದ್ದು ಅದರಲ್ಲಿ ಬಂಟಕಲ್ ಇಂಜಿನಿಯರಿಂಗ್ ಕಾಲೇಜು 13ನೇ ಸ್ಥಾನವನ್ನು ಪಡೆದಿದೆ. ಕರಾವಳಿ ಭಾಗದಲ್ಲಿ ಎ ಶ್ರೇಯಾಂಕ ಪಡೆದ ಮೂರು ಇಂಜಿನಿಯರಿಂಗ್ ಕಾಲೇಜುಗಳ ಪೈಕಿ ಬಂಟಕಲ್ ಅತೀ ಹೆಚ್ಚಿನ ಅಂಕಗಳನ್ನು ಪಡೆದುಕೊಂಡಿದೆ. ಇಂತಹ ಉತ್ತಮ ಶ್ರೇಯಾಂಕವನ್ನು ಪಡೆದಿ ರುವುದಕ್ಕೆ ಕಾಲೇಜಿನ ಆಡಳಿತ ಮಂಡಳಿಯ ಮುಖ್ಯಸ್ಥ ಸೋದೆ ಮಠಾಧೀಶ ಶ್ರೀವಿಶ್ವವಲ್ಲಭತೀರ್ಥ ಸ್ವಾಮೀಜಿ ಹರ್ಷ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News