ಶಾಸಕ ಭರತ್ ಶೆಟ್ಟಿಯಿಂದ ಉಚಿತ ನೀರು ಪೂರೈಕೆ

Update: 2019-05-21 14:30 GMT

ಮಂಗಳೂರು, ಮೇ 20: ನೀರಿನ ಕೊರತೆ ಎದುರಿಸುತ್ತಿರುವ ಮಂಗಳೂರು ಉತ್ತರ ಕ್ಷೇತ್ರಕ್ಕೆ ಅಗತ್ಯವಿರುವ ಕಡೆ ಶಾಸಕ ಡಾ.ಭರತ್ ಶೆಟ್ಟಿ ನೇತೃತ್ವದಲ್ಲಿ ಉಚಿತ ನೀರು ಪೂರೈಕೆ ವ್ಯವಸ್ಥೆ ಕೈಗೊಳ್ಳಲಾಯಿತು.

ಸ್ವತಃ ಶಾಸಕರೇ ನೀರಿನ ಅಭಾವ ಸ್ಥಳಕ್ಕೆ ಭೇಟಿ ನೀಡಿ ನಾಗರಿಕರೊಂದಿಗೆ ಚರ್ಚಿಸಿದರು. ತಮ್ಮ ವೈಯಕ್ತಿಕ ನೆಲೆಯಲ್ಲಿ ನೀರಿನ ಟ್ಯಾಂಕರ್‌ ಗಳನ್ನು ವ್ಯವಸ್ಥೆ ಮಾಡಿದರು.

ಆ ಟ್ಯಾಂಕರ್‌ಗಳೊಂದಿಗೆ ಸ್ವತಃ ತಾವು ಕೂಡ ವಿವಿಧ ಪ್ರದೇಶಗಳಿಗೆ ತೆರಳಿ ಜನಸಾಮಾನ್ಯರ ಮನೆಗಳಿಗೆ ನೀರಿನ ಪೂರೈಕೆ ಆಗುವಂತೆ ಖುದ್ದು ಮೇಲ್ವಿಚಾರಣೆ ನಡೆಸಿದರು. ತಮ್ಮ ಕ್ಷೇತ್ರದ ಜನ ಫೋನ್ ಮೂಲಕ ನೀರಿನ ಸಮಸ್ಯೆ ಹೇಳಿದ ಪ್ರದೇಶಗಳಿಗೆ ಆದ್ಯತೆಯ ಮೇರೆಗೆ ಅಲ್ಲಿಗೆ ತೆರಳಿ ನೀರು ಸಿಗುವಂತೆ ಮಾಡುವ ವ್ಯವಸ್ಥೆ ಮಾಡಿದರು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಡಾ.ಭರತ್ ಶೆಟ್ಟಿ ವೈ., ಮಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ನಾಗರಿಕರು ನೀರಿನ ಸಮಸ್ಯೆ ಅನುಭವಿಸುತ್ತಿದ್ದಾರೆ. ಒಂದೆಡೆ ಬಿಸಿಲಿನ ಝಳದಿಂದ ನೀರಿನ ಬಳಕೆ ಹೆಚ್ಚಾಗಿದೆ. ಮತ್ತೊಂದೆಡೆ ನೀರಿನ ಕೊರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಸಂದರ್ಭದಲ್ಲಿ ಜನಸಾಮಾನ್ಯರು ನೀರಿಗಾಗಿ ಟ್ಯಾಂಕರ್‌ನ್ನು ಅವಲಂಬಿಸುತ್ತಿದ್ದಾರೆ. ಆದರೆ ಮಹಾನಗರ ಪಾಲಿಕೆ ಪೂರೈಸುವ ಬೆರಳೆಣಿಕೆಯ ಟ್ಯಾಂಕರ್‌ಗಳು ವಿಶಾಲವಾಗಿರುವ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಸಾಕಾಗುತ್ತಿಲ್ಲ. ಈ ನಿಟ್ಟಿನಲ್ಲಿ ನನ್ನಿಂದಾದ ಪ್ರಯತ್ನ ಮಾಡುತ್ತಿದ್ದೇನೆ ಎಂದರು.

ಈ ಸಂದರ್ಭ ಕಿರಣ್‌ಕುಮಾರ್ ಕೋಡಿಕಲ್, ತಿಲಕ್‌ರಾಜ್ ಕೃಷ್ಣಾಪುರ, ಭರತ್‌ರಾಜ್ ಕೃಷ್ಣಾಪುರ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News