​ಉಡುಪಿ ನಗರಸಭೆಯಲ್ಲಿ ಮುಂದುವರಿದ ಟ್ಯಾಂಕರ್ ನೀರು

Update: 2019-05-21 15:33 GMT

ಉಡುಪಿ, ಮೇ 21: ನೀರಿನ ಸಮಸ್ಯೆ ಉಂಟಾದ ಪ್ರದೇಶಗಳಿಗೆ ಉಡುಪಿ ನಗರಸಭೆ ವತಿಯಿಂದ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡುವ ಕಾರ್ಯ ಇಂದೂ ಮುಂದುವರಿಯಿತು.

ಮೂಡುಪೆರಂಪಳ್ಳಿ, ಇಂದ್ರಾಳಿ, ಅಜ್ಜರಕಾಡು, ಕಸ್ತೂರ್ಬಾ ನಗರ, ಬೈಲೂರು, ಬನ್ನಂಜೆ, ಶಿರಿಬೀಡು, ಕೊಡಂಕೂರು ಪ್ರದೇಶಗಳಿಗೆ ಟ್ಯಾಂಕರ್‌ಗಳ ಮೂಲಕ 16 ಟ್ರಿಪ್ ಗಳಲ್ಲಿ ನೀರು ಪೂರೈಕೆ ಮಾಡಲಾಯಿತು ಎಂದು ಅಧಿ ಕಾರಿಗಳು ತಿಳಿಸಿದ್ದಾರೆ.

ಉಡುಪಿ ಶಾಸಕ ಕೆ.ರಘುಪತಿ ಭಟ್ ಇಂದು ಬಜೆ ಡ್ಯಾಂ, ಪುತ್ತಿಗೆ ಸೇತುವೆ ಹಾಗೂ ಭಂಡಾರಿಬೆಟ್ಟು ನೀರು ಪಂಪಿಂಗ್ ಆಗುವ ಸ್ಥಳಗಳಿಗೆ ಭೇಟಿ ನೀಡಿ ನೀರಿನ ಮಟ್ಟವನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಸೋಹೆಲ್ ಅಮೀನ್ ಉಪಸ್ಥಿತರಿದ್ದರು.

ಅನುಮೋದನೆಗೆ ಬಾಕಿ: ಸ್ವರ್ಣ ನದಿಯ ಬಜೆ ಡ್ಯಾಂನಿಂದ ಶಿರೂರು ಮಠದ ಪ್ರದೇಶದವರೆಗೆ ಹೂಳು ತೆಗೆಯುವ ಕಾಮಗಾರಿಯ ಟೆಂಡರ್‌ನ್ನು ಅನುಮೋದನೆಗಾಗಿ ನಗರಾಭಿವೃದ್ಧಿ ಕೋಶವು ಮಂಗಳೂರಿನ ಅಧೀಕ್ಷಕ ಅಭಿಯಂತರರಿಗೆ ಕಳುಹಿಸಿಕೊಟ್ಟಿದೆ.

ಅಧೀಕ್ಷಕ ಅಭಿಯಂತರಲ್ಲಿ ಟೆಂಡರ್ ಅನುಮೋದನೆಯಾಗಿ ಬಂದ ಕೂಡಲೇ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗುವುದು. ಎರಡು ದಿನ ಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಬಹುದು ಎಂದು ಉಡುಪಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಂತೋಷ್ ಕುಮಾರ್ ತಿಳಿಸಿದ್ದಾರೆ.

ಇಂದು ನೀರು ಪೂರೈಕೆ: ಉಡುಪಿ ನಗರಸಭೆ ವ್ಯಾಪ್ತಿಯ ಈಶ್ವರ ನಗರ, ನೆಹರೂ ನಗರ, ಸರಳೇಬೆಟ್ಟು, ಕೊಂಡಂಗೆ, ನರಸಿಂಗೆ, ವಿವೇಕಾನಂದ ನಗರ, ಶೇಷಾದ್ರಿ ನಗರ, ವಿಪಿ ನಗರ, ಇಂದ್ರಾಳಿ, ಗುಳ್ಮೆ, ರೈಲ್ವೆ ಗೋಡಾನ್ ರೋಡ್, ಮಂಚಿ ಶಾಲೆ ರಸ್ತೆ, ಹಯಗ್ರೀವ ನಗರ, ಲಕ್ಷ್ಮೀಂದ್ರ ನಗರ, ಸಗ್ರಿ, ಪೆರಂಪಳ್ಳಿ, ಅಂಬಡೆಬೆಟ್ಟು, ವಿ.ಎಂ.ನಗರ, ದೊಡ್ಡಣಗುಡ್ಡೆ ರೈಲ್ವೆ ಸೇತುವೆವರೆಗೆ, ಪೆರಂಪಳ್ಳಿ ರೈಲ್ವೆ ಸೇತುವೆವರೆಗೆ, ಆದಿಪರಾಶಕ್ತಿ ದೇವಸ್ಥಾನ ರಸ್ತೆ, ರುದ್ರಪ್ರಿಯ ನಗರ, ಪತ್ರಕರ್ತರ ಕಾಲೋನಿ, ವಿದ್ಯಾರತ್ನ ನಗರ, ಶೀಂಬ್ರ, ಮಣಿಪಾಲ ಸಿಟಿ, ಕುದ್ಮಲ್ ರಂಗರಾವ್ ನಗರ, ಕೊಡಂಕೂರು, ನ್ಯೂ ಕೊಡಂಕೂರು, ಸಾಯಿ ಬಾಬಾ ನಗರ, ಮೂಡಬೆಟ್ಟು, ಆದಿ ಉಡುಪಿ, ಮುಖ್ಯಪ್ರಾಣ ನಗರ, ನಾಗೇಶ್ ನಗರ, ರಾಜೀವ ನಗರಗಳಿಗೆ ಮೇ 22ರಂದು ನೀರು ಸರಬರಾಜು ಮಾಡಲಾಗುವುದು ಎಂದು ಪೌರಾಯುಕ್ತ ಆನಂದ ಕಲ್ಲೋಳಿಕರ್ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News