ಇಲಿ ಪಾಷಣ ಸೇವಿಸಿ ಮಹಿಳೆ ಆತ್ಮಹತ್ಯೆ

Update: 2019-05-21 15:35 GMT

ಹೆಬ್ರಿ, ಮೇ 21: ಇಲಿ ಪಾಷಣ ಸೇವಿಸಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿ ಕೊಂಡ ಘಟನೆ ಕಳ್ತೂರು ಗ್ರಾಮದ ಮೊಗಬೆಟ್ಟು ಎಂಬಲ್ಲಿ ನಡೆದಿದೆ.

ಮೃತರನ್ನು ಮೊಗಬೆಟ್ಟುವಿನ ಅಜಿತ್ ಹೆಗ್ಡೆ ಎಂಬವರ ಪತ್ನಿ ಆಶಾಲತಾ ಶೆಟ್ಟಿ (36) ಎಂದು ಗುರುತಿಸಲಾಗಿದೆ. ಇವರು ಮನೆಯಲ್ಲಿ ತಂದಿಟ್ಟಿದ್ದ ಇಲಿ ಪಾಷಣ ಸೇವಿಸಿದ್ದು, ಈ ವಿಚಾರವನ್ನು ಯಾರಿಗೂ ಹೇಳದೆ ಮೇ 18ರಂದು ತೀವ್ರ ಅಸ್ಪಸ್ಥಗೊಂಡಿದ್ದರು. ಇವರನ್ನು ಕೂಡಲೇ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆಶಾಲತಾ ಮೇ 21ರಂದು ನಸುಕಿನ ವೇಳೆ 1.45ರ ಸುಮಾರಿಗೆ ಮೃತಪಟ್ಟರು.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News