ಉಡುಪಿ ಜಿಲ್ಲಾ ಕಾರಾಗೃಹದಲ್ಲಿ ಭ್ರಷ್ಟಾಚಾರ: ಜೈಲರ್ ಶಿವಕುಮಾರ್ ವಿರುದ್ಧ ಪ್ರಕರಣ ದಾಖಲು

Update: 2019-05-21 15:37 GMT

ಹಿರಿಯಡ್ಕ, ಮೇ 21: ಉಡುಪಿ ಜಿಲ್ಲಾ ಕಾರಾಗೃಹದ ಸೊತ್ತುಗಳ ಖರೀದಿಗೆ ಸಂಬಂಧಿಸಿ 2012-13ರ ಅವಧಿಯಲ್ಲಿ ಲಕ್ಷಾಂತರ ರೂ. ಹಣ ದುರು ಪಯೋಗಪಡಿಸಿಕೊಂಡ ಆಗಿನ ಪ್ರಭಾರಿ ಅಧೀಕ್ಷಕ ಜೈಲರ್ ಎನ್.ಎಸ್.ಶಿವ ಕುಮಾರ್ ವಿರುದ್ಧ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇವರು ಪ್ರಭಾರಿ ಅಧೀಕ್ಷಕರಾಗಿ 2012ರ ಜ.19ರಿಂದ 2013ರ ಜು.17 ರವರೆಗೆ ಕರ್ತವ್ಯ ನಿರ್ವಹಿಸಿದ್ದು, ಈ ಅವಧಿಯಲ್ಲಿ ಇವರು ಜಿಲ್ಲಾ ಕಾರಾಗೃಹ ದಲ್ಲಿ ವಿದ್ಯುತ್ ಜೋಡಣೆ ಮತ್ತು ನಲ್ಲಿಗಳ ದುರಸ್ತಿ, ಕಂಪ್ಯೂಟರ್ ಟೇಬಲ್, ಕುರ್ಚಿ, ಕೊಡೆ, ನೀರಿನ ಟ್ಯಾಂಕ್, ಲೇಖನ ಸಾಮಗ್ರಿಗಳ ಖರೀದಿ, ಕೊಳವೆ ಬಾವಿಯ ಪಂಪ್ ದುರಸ್ತಿ, ಆಹಾರ ಸಾಮಗ್ರಿ ಪೂರೈಕೆಯ ಸಾಲದ ಬಿಲ್, ವಾಹನಗಳ ಇಂಧನ, ಜನರೇಟರ್ ದುರಸ್ತಿ, ಡಿಸೇಲ್ ಖರೀದಿಯಲ್ಲಿ ಒಟ್ಟು 3,86,814ರೂ. ಹಣ ದುರುಪಯೋಗ ಪಡಿಸಿಕೊಂಡು ಸರಕಾರಕ್ಕೆ ಆರ್ಥಿಕ ನಷ್ಟ ಉಂಟುಮಾಡಿರುವುದಾಗಿ ದೂರಲಾಗಿದೆ.

2009ರ ನ.1ರಿಂದ 2013ರವರೆಗಿನ ಇಲಾಖಾ ಲೆಕ್ಕ ಪರಿಶೋಧನೆಯನ್ನು ನಡೆಸಿದಾಗ ಈ ಹಣ ದುರುಪಯೋ ಗ ಮಾಡಿರುವುದು ಕಂಡು ಬಂದಿದೆ. ಕಾರಾಗೃಹ ಇಲಾಖೆಯ ಲೆಕ್ಕ ಪರಿಶೋಧನಾ ಶಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಹಾಗೂ ಲೆಕ್ಕಾಧಿಕಾರಿ ಮತ್ತು ಲೆಕ್ಕಾಧೀಕ್ಷಕರ ಹುದ್ದೆ ಖಾಲಿಯಿದ್ದ ಕಾರಣ ಈ ಪ್ರಕರಣವನ್ನು ನಿರ್ವಹಿಸಲು ಹಾಗೂ ದೂರು ನೀಡಲು ವಿಳಂಬವಾಗಿದೆ ಎಂದು ಪ್ರಸ್ತುತ ಜಿಲ್ಲಾ ಕಾರಾಗೃಹದ ಪ್ರಭಾರಿ ಅಧೀಕ್ಷಕ ಜೈಲರ್ ಸಂಜಯ್ ಜೆತ್ತಿ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News