ಇಬ್ಬರು ಭಾರತೀಯರಿಗೆ 10 ವರ್ಷಗಳ ಯುಎಇ ವೀಸಾ

Update: 2019-05-22 16:23 GMT

ದುಬೈ, ಮೇ 22: ಹೂಡಿಕೆದಾರರು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಕರ್ಷಿಸಲು ರೂಪಿಸಲಾದ ದೀರ್ಘಾವಧಿ ವಾಸ್ತವ್ಯ ಯೋಜನೆಯಡಿ, ಯುಎಇಯು ಇಬ್ಬರು ಭಾರತೀಯ ಉದ್ಯಮಿಗಳಿಗೆ ಮಂಗಳವಾರ 10 ವರ್ಷಗಳ ವೀಸಾವನ್ನು ನೀಡಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.

ಜವಳಿ ಉದ್ಯಮಿ ವಾಸು ಶ್ರಾಫ್ ಮತ್ತು ಚಲನಚಿತ್ರಗಳು ಹಾಗೂ ಆಭರಣ ಕ್ಷೇತ್ರದಲ್ಲಿ ಉದ್ಯಮಗಳನ್ನು ಹೊಂದಿರುವ ಖುಶಿ ಖಟ್ವಾನಿ, 10 ವರ್ಷಗಳ ಅವಧಿಯ ವೀಸಾ ಪಡೆದ ಮೊದಲ ಭಾರತೀಯರಾಗಿದ್ದಾರೆ.

ವಾಸು ಶ್ರಾಫ್ ರೀಗಲ್ ಗ್ರೂಫ್ ಆಫ್ ಕಂಪೆನೀಸ್‌ನ ಅಧ್ಯಕ್ಷರಾಗಿದ್ದಾರೆ ಹಾಗೂ ಖುಶಿ ಖಟ್ವಾನಿ ಖುಶಿ ಗ್ರೂಪ್ ಆಫ್ ಕಂಪೆನೀಸ್ ಮತ್ತು ಅಲ್ ನಿಸಾರ್ ಸಿನೇಮಾ ಫಿಲ್ಮ್ ಇವುಗಳ ಆಡಳಿತ ನಿರ್ದೇಶಕಿಯಾಗಿದ್ದಾರೆ.

ಯುಎಇಯು 10 ವರ್ಷಗಳ ವೀಸಾ ಯೋಜನೆಯನ್ನು ಈ ವರ್ಷದ ಜನವರಿಯಲ್ಲಿ ಜಾರಿಗೆ ತಂದಿತ್ತು. ಈ ಮಾದರಿಯ ವೀಸಾಗಳನ್ನು ಆರಂಭದಲ್ಲಿ ಕೆಲವು ಅರಬ್ ವಿಜ್ಞಾನಿಗಳು ಮತ್ತು ವೈದ್ಯಕೀಯ ಕ್ಷೇತ್ರದ ಪರಿಣತರಿಗೆ ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News