ಮೊದಲ ಸುಧಾರಿತ ಜೆಎಫ್-17 ಯುದ್ಧ ವಿಮಾನ ಪಾಕ್‌ಗೆ

Update: 2019-05-22 16:44 GMT

ಬೀಜಿಂಗ್, ಮೇ 22: ಜೆಎಫ್-17 ಯುದ್ಧ ವಿಮಾನಗಳ ಅಭಿವೃದ್ಧಿ ಮತ್ತು ಉತ್ಪಾದನೆಗಾಗಿ ಚೀನಾ ಮತ್ತು ಪಾಕಿಸ್ತಾನಗಳು ದಶಕದ ಹಿಂದೆ ರೂಪಿಸಿದ ಯೋಜನೆಯ ಭಾಗವಾಗಿ, ಮೊದಲ ಸುಧಾರಿತ ಯುದ್ಧ ವಿಮಾನವನ್ನು ಚೀನಾ ಪಾಕಿಸ್ತಾನಕ್ಕೆ ಹಸ್ತಾಂತರಿಸಿದೆ. ಇದು ಪಾಕಿಸ್ತಾನದ ವಾಯುಪಡೆಯ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಿದೆ.

ಒಂಟಿ ಇಂಜಿನ್ ಹೊಂದಿರುವ ಹಗುರ ಜೆಎಫ್-17 ಯುದ್ಧ ವಿಮಾನಗಳ ಜಂಟಿ ಅಭಿವೃದ್ಧಿ ಮತ್ತು ಉತ್ಪಾದನೆಯನ್ನು ಉಭಯ ದೇಶಗಳು ದಶಕದ ಹಿಂದೆ ಆರಂಭಿಸಿದ್ದವು. ಮೊದಲ ಜೆಎಫ್-17 (ಸುಧಾರಿತವಲ್ಲದ) ಯುದ್ಧವಿಮಾನವನ್ನು ಚೀನಾ 2007ರಲ್ಲೇ ಪಾಕಿಸ್ತಾನಕ್ಕೆ ಪೂರೈಸಿತ್ತು. ಆ ಬಳಿಕ ನಿರಂತರವಾಗಿ ಆ ಮಾದರಿಯ ಯುದ್ಧ ವಿಮಾನಗಳು ಪಾಕಿಸ್ತಾನಕ್ಕೆ ಪೂರೈಕೆಯಾಗುತ್ತಿದ್ದವು.

ಈಗ ಒಂದು ದಶಕದ ಬಳಕೆಯ ಬಳಿಕ, ಸುಧಾರಿತ ತಂತ್ರಜ್ಞಾನ ಹಾಗೂ ವಿನ್ಯಾಸದ ಮೊಲದ ಜೆಎಫ್-ವಿಮಾನವನ್ನು ಚೀನಾ ಪಾಕಿಸ್ತಾನಕ್ಕೆ ಹಸ್ತಾಂತರಿಸಿದೆ ಎಂದು ಚೀನಾದ ಸರಕಾರಿ ಒಡೆತನದ ಪತ್ರಿಕೆ ‘ಗ್ಲೋಬಲ್ ಟೈಮ್ಸ್’ ಬುಧವಾರ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News