ಪಾಕಿಸ್ತಾನೀಯರಿಗೆ ವೀಸಾ ನಿಲ್ಲಿಸಿದ ಬಾಂಗ್ಲಾದೇಶ

Update: 2019-05-22 16:46 GMT

ಢಾಕಾ, ಮೇ 22: ಪಾಕಿಸ್ತಾನಿ ರಾಷ್ಟ್ರೀಯರಿಗೆ ವೀಸಾಗಳನ್ನು ನೀಡುವುದನ್ನು ಬಾಂಗ್ಲಾದೇಶ ನಿಲ್ಲಿಸಿದೆ ಹಾಗೂ ಬಾಂಗ್ಲಾದೇಶಕ್ಕೆ ನೂತನ ಹೈಕಮಿಶನರ್ ನೇಮಕದ ಪಾಕಿಸ್ತಾನಿ ಒಪ್ಪಂದವನ್ನು ಸ್ವೀಕರಿಸಲೂ ನಿರಾಕರಿಸಿದೆ.

ಪಾಕಿಸ್ತಾನದಲ್ಲಿರುವ ಬಾಂಗ್ಲಾದೇಶಿ ರಾಜತಾಂತ್ರಿಕ ಮುಹಮ್ಮದ್ ಇಕ್ಬಾಲ್ ಹುಸೈನ್ ವೀಸಾ ವಿಸ್ತರಣೆ ಕೋರಿ ನಾಲ್ಕು ತಿಂಗಳ ಹಿಂದೆ ಸಲ್ಲಿಸಿರುವ ಅರ್ಜಿಯನ್ನು ಪಾಕಿಸ್ತಾನ ಇನ್ನೂ ವಿಲೇವಾರಿಗೊಳಿಸದಿರುವುದನ್ನು ಪ್ರತಿಭಟಿಸಿ ಬಾಂಗ್ಲಾದೇಶ ಈ ಕ್ರಮ ತೆಗೆದುಕೊಂಡಿದೆ.

ಇಸ್ಲಾಮಾಬಾದ್‌ನಲ್ಲಿರುವ ಬಾಂಗ್ಲಾದೇಶ ಹೈಕಮಿಶನ್ ಒಂದು ವಾರದಿಂದ ಪಾಕಿಸ್ತಾನೀಯರಿಗೆ ವೀಸಾಗಳನ್ನು ನೀಡುವುದನ್ನು ನಿಲ್ಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News