ಐಎಎಫ್‌ನಿಂದ ಬ್ರಹ್ಮೋಸ್ ಕ್ಷಿಪಣಿಯ ವೈಮಾನಿಕ ಆವೃತ್ತಿಯ ಯಶಸ್ವಿ ಪರೀಕ್ಷಾರ್ಥ ಪ್ರಯೋಗ

Update: 2019-05-22 16:50 GMT

ಹೊಸದಿಲ್ಲಿ, ಮೇ 22: ಸು-30 ಯುದ್ಧ ವಿಮಾನದಿಂದ ಸೂಪರ್‌ಸಾನಿಕ್ ಬ್ರಹ್ಮೋಸ್ ದಾಳಿ ಕ್ಷಿಪಣಿಯ ವೈಮಾನಿಕ ಆವೃತ್ತಿಯನ್ನು ಯಶಸ್ವಿಯಾಗಿ ಪರೀಕ್ಷಾರ್ಥ ಉಡಾಯಿಸಲಾಗಿದೆ ಎಂದು ಭಾರತೀಯ ವಾಯು ಪಡೆ ಬುಧವಾರ ತಿಳಿಸಿದೆ.

ವಾಯುವಿನಿಂದ ಭೂಮಿಗೆ ನೆಗೆಯುವ 2.5 ಟನ್ ತೂಕದ ಈ ಕ್ಷಿಪಣಿ ಸುಮಾರು 300 ಕಿ.ಮೀ. ವ್ಯಾಪ್ತಿಯನ್ನು ಹೊಂದಿದೆ. ಇದು ಭಾರತೀಯ ವಾಯು ಪಡೆಯ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸಲಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

ಬ್ರಹ್ಮೋಸ್ ದಾಳಿ ಕ್ಷಿಪಣಿ ಮ್ಯಾಕ್ 2.8 ವೇಗದಲ್ಲಿ ಸಾಗಲಿದೆ. ಇದು ಧ್ವನಿ ಸಾಗುವ ವೇಗಕ್ಕಿಂತ ಮೂರು ಪಟ್ಟು ಹೆಚ್ಚು ಎಂದು ಅವರು ತಿಳಿಸಿದ್ದಾರೆ. ‘‘ವಿಮಾನದಿಂದ ಬ್ರಹ್ಮೋಸ್ ಕ್ಷಿಪಣಿಯ ಉಡಾವಣೆ ಸುಲಲಿತವಾಗಿ ಆಗಿದೆ. ಭೂಮಿಯ ಮೇಲಿನ ಗುರಿಗೆ ನೇರವಾಗಿ ಹೊಡೆಯುವ ಮುನ್ನ ಕ್ಷಿಪಣಿ ಬಯಸಿದ ಪಥವನ್ನು ಅನುಸರಿಸಿದೆ’’ ಎಂದು ಭಾರತೀಯ ವಾಯು ಪಡೆಯ ಗ್ರೂಪ್ ಕ್ಯಾಪ್ಟನ್ ಅನುಪಮ್ ಬ್ಯಾನರ್ಜಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News