ಇವಿಂಗಳ ಸಾಗಾಟಕ್ಕೆ ಬಾಲಕಾರ್ಮಿಕರ ಬಳಕೆ: ಚುನಾವಣಾ ಆಯೋಗಕ್ಕೆ ತೇಜಸ್ವಿ ಯಾದವ್ ತರಾಟೆ

Update: 2019-05-22 17:13 GMT

ಪಾಟ್ನಾ(ಬಿಹಾರ),ಮೇ 22: ಇವಿಂಗಳಂತೆ ಕಾಣುವ ಪೆಟ್ಟಿಗೆಗಳನ್ನು ಹೊತ್ತೊಯ್ಯುತ್ತಿರುವ ಮಕ್ಕಳ ಚಿತ್ರವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿರುವ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು,ಮತದಾನ ಯಂತ್ರಗಳ ಸಾಗಾಟ ಮತ್ತು ದಾಸ್ತಾನು ಕುರಿತು ಚುನಾವಣಾ ಆಯೋಗವನ್ನು ತರಾಟೆಗೆತ್ತಿಕೊಂಡಿದ್ದಾರೆ. ಪೆಟ್ಟಿಗೆಗಳನ್ನು ನೋಂದಣಿರಹಿತ ವಾಹನಗಳಲ್ಲಿ ಸಾಗಿಸಿದ್ದಕ್ಕಾಗಿಯೂ ಅವರು ಆಯೋಗವನ್ನು ಟೀಕಿಸಿದ್ದಾರೆ.

 ಬಿಹಾರದಲ್ಲಿ ಬಾಲಕಾರ್ಮಿಕರನ್ನು ಬಳಸಿಕೊಂಡು ಇವಿಎಮ್‌ಗಳನ್ನು ಸಾಗಿಸಲಾಗುತ್ತಿದೆ. ನಿಯಮಗಳ ವಿರುದ್ಧ ಅವುಗಳನ್ನು ನೋಂದಣಿಯಿಲ್ಲದ ವಾಹನಗಳಲ್ಲಿ ರವಾನಿಸಲಾಗುತ್ತಿದೆ. ಇವಿಎಮ್‌ಗಳನ್ನು ಮುಝಫ್ಫರ್‌ಪುರದ ಹೋಟೆಲ್ಲೊಂದಕ್ಕೆ ಸಾಗಿಸಲಾಗಿದ್ದು,ಅಲ್ಲಿ ಮ್ಯಾಜಿಸ್ಟ್ರೇಟ್ ಉಪಸ್ಥಿತಿಯಲ್ಲಿ ಅವು ಕಂಡುಬಂದಿವೆ ಎಂದು ಅವರು ಟ್ವೀಟಿಸಿದ್ದಾರೆ.

ಉತ್ತರ ಪ್ರದೇಶ,ಬಿಹಾರ,ಪಂಜಾಬ್ ಮತ್ತು ಹರ್ಯಾಣಗಳಲ್ಲಿ ಇವಿಎಮ್‌ಗಳನ್ನು ತಿರುಚಲಾಗಿದೆ ಎಂಬ ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳ ಆರೋಪಗಳ ನಡುವೆಯೇ ಯಾದವ ದಾಳಿ ನಡೆಸಿದ್ದಾರೆ. ಇವಿಎಮ್‌ಗಳಲ್ಲಿ ವಂಚನೆ ನಡೆಯುತ್ತಿದೆ ಎಂಬ ಶಂಕೆಯಿಂದ ಹಲವಾರು ರಾಜ್ಯಗಳಲ್ಲಿ ಪ್ರತಿಪಕ್ಷಗಳ ಕಾರ್ಯಕರ್ತರು ಇವಿಎಂ ಭದತಾ ಕೊಠಡಿಗಳ ಮೆಲೆ 24 ಗಂಟೆಗಳ ನಿಗಾ ಇರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News