ಇವಿಎಂಗಳನ್ನು ದೋಚಿದ ಬಂದೂಕು,ಮಚ್ಚುಗಳನ್ನು ಹೊಂದಿದ್ದ 500 ಮುಸುಕುಧಾರಿಗಳ ಗುಂಪು!

Update: 2019-05-22 17:31 GMT
ಸಾಂರ್ಧಬಿಕ ಚಿತ್ರ

ಗುವಾಹಟಿ,ಮೇ 22: ಮಂಗಳವಾರ ಮರುಮತದಾನ ನಿಗದಿಯಾಗಿದ್ದ ಮತಗಟ್ಟೆಗೆ ತೆರಳುತ್ತಿದ್ದ ಚುನಾವಣಾಧಿಕಾರಿ ಗಳ ತಂಡದ ಮೇಲೆ ದಾಳಿ ನಡೆಸಿದ ಬಂದೂಕು ಮತ್ತು ಮಚ್ಚುಗಳಿಂದ ಸಜ್ಜಿತ ಸುಮಾರು 500 ಮುಸುಕುಧಾರಿಗಳು ವಿದ್ಯುನ್ಮಾನ ಮತದಾನ ಯಂತ್ರಗಳನ್ನು ದೋಚಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದರು.

ಕೊಲೊರಿಯಾಂಗ್ ಮತಗಟ್ಟೆಯಲ್ಲಿ ಚುನಾವಣೆ ವೇಳೆ ಅಕ್ರಮಗಳ ಆರೋಪಗಳು ಕೇಳಿ ಬಂದಿದ್ದರಿಂದ ಚುನಾವಣಾ ಆಯೋಗವು ಅಲ್ಲಿ ಮಂಗಳವಾರ ಮರುಮತದಾನಕ್ಕೆ ಆದೇಶಿಸಿತ್ತು. ಇದಕ್ಕಾಗಿ ನಿಯೋಜಿತ ಚುನಾವಣಾಧಿಕಾರಿಗಳ ತಂಡವು ರವಿವಾರ ದಟ್ಟಾರಣ್ಯದ ಮೂಲಕ ಅಲ್ಲಿಗೆ ಪ್ರಯಾಣಿಸುತ್ತಿದ್ದಾಗ ಅದರ ಮೇಲೆ ದಾಳಿ ನಡೆದಿತ್ತು. ದಾಳಿಕೋರರ ಪೈಕಿ ಕೆಲವರು ಗುಂಡುಗಳನ್ನು ಹಾರಿಸಿದ್ದರಾದರೂ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ಹೇಳಿದರು.

ಘಟನೆಯ ಬೆನ್ನಿಗೇ ಹೊಸತಂಡವನ್ನು ಕೊಲೊರಿಯಾಂಗ್‌ಗೆ ರವಾನಿಸಲಾಗಿದ್ದು,ನಿಗದಿಯಂತೆ ಮಂಗಳವಾರ ಮರುಮತದಾನ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News