ವಿವಿ ಪ್ಯಾಟ್ ಕುರಿತ ಇ.ಸಿ. ನಿರ್ಧಾರ ಸುಪ್ರೀಂ ಆದೇಶದ ವಿರುದ್ಧ ಸಾಗುತ್ತಿದೆ: ಯೆಚೂರಿ

Update: 2019-05-22 17:43 GMT

ಹೊಸದಿಲ್ಲಿ, ಮೇ 22: ಮೊದಲು ವಿವಿ ಪ್ಯಾಟ್ ಸ್ಲಿಪ್ ಎಣಿಕೆ ಮಾಡುವ ಪ್ರತಿಪಕ್ಷದ ಆಗ್ರಹವನ್ನು ಚುನಾವಣಾ ಆಯೋಗ ತಿರಸ್ಕರಿಸುವ ಮೂಲಕ ಇವಿಎಂ ಕುರಿತು ಸುಪ್ರೀಂ ಕೋರ್ಟ್‌ನ ಆದೇಶದ ಆಶಯಕ್ಕೆ ವಿರುದ್ಧವಾಗಿ ಸಾಗುತ್ತಿದೆ ಎಂದು ಸಿಪಿಐ (ಎಂ)ನ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಬುಧವಾರ ಹೇಳಿದ್ದಾರೆ.

ವಿವಿ ಪ್ಯಾಟ್‌ನ ಸ್ಲಿಪ್‌ಗಳನ್ನು ಮೊದಲು ಎಣಿಕೆ ಮಾಡದೆ, ನಂತರ ಎಣಿಕೆ ಮಾಡುವ ತನ್ನ ನಿರ್ಧಾರಕ್ಕೆ ಚುನಾವಣಾ ಆಯೋಗ ಅಂಟಿಕೊಂಡ ಬಳಿಕ ಯೆಚೂರಿ ಅವರಿಂದ ಈ ಪ್ರತಿಕ್ರಿಯೆ ಹೊರಬಿದ್ದಿದೆ. ಚುನಾವಣೆ ಆರಂಭವಾಗುವುದಕ್ಕಿಂತ ಮುನ್ನ ವಿವಿ ಪ್ಯಾಟ್ ಕುರಿತು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಆಶಯಕ್ಕೆ ವಿರುದ್ಧವಾಗಿ ಚುನಾವಣಾ ಆಯೋಗ ಸಾಗುತ್ತಿದೆ ಎಂದು ಯೆಚೂರಿ ಟ್ವೀಟ್ ಮಾಡಿದ್ದಾರೆ. ಪಾರದರ್ಶಕತೆಗಾಗಿ ಈ ಚುನಾವಣಾ ಪ್ರಕ್ರಿಯೆ ದೀರ್ಘಕಾಲ ತೆಗೆದುಕೊಳ್ಳುವಂತಿದ್ದರೆ, ಸ್ಲಿಪ್‌ಗಳನ್ನು ಮೊದಲು ಎಣಿಕೆ ಮಾಡುವ ಮೂಲ ತತ್ವವನ್ನು ಅನುಸರಿಸಲು ಯಾಕೆ ಸಾಧ್ಯವಿಲ್ಲ ಎಂದು ಯೆಚೂರಿ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News