​ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕೆಗೆ ಕ್ಷಣಗಣನೆ

Update: 2019-05-23 02:39 GMT

ಉಡುಪಿ: ​ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದ್ದು ಮತ ಎಣಿಕೆ ಕೇಂದ್ರವಾಗಿರುವ ಬ್ರಹ್ಮಗಿರಿಯ ಸೈಂಟ್ ಸಿಸಿಲಿಸ್ ಶಾಲೆಯ ಸುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಮತ ಯಂತ್ರ ಗಳು ಭದ್ರವಾಗಿರುವ ಸ್ಟ್ರಾಂಗ್ ರೂಂಗಳನ್ನು ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪಾಟಿ ಸಮ್ಮುಖದಲ್ಲಿ ತೆರೆಯಲಾಯಿತು. ಈ ಸಂದರ್ಬದಲ್ಲಿ ಎಸ್ಪಿ ಸಿಇಒ ಹಾಜರಿದ್ದರು. ಅಂಚೆ ಮತ ಎಣಿಕೆ ಕಾರ್ಯ 8 ಗಂಟೆಗೆ ಆರಂಭವಾಗಲಿದೆ.

ಕೇಂದ್ರದ ಪ್ರಮುಖ ಗೇಟ್ ಬಂದ್ ಮಾಡಲಾಗಿದ್ದು ಹಿಂಬದಿ ಗೇಟ್ ಅಂದರೆ ಅಜ್ಜರಕಾಡ್ ಆಸ್ಪತ್ರೆ ಎದುರಿನ ರಸ್ತೆಯಲ್ಲಿ ಪ್ರವೇಶ ದ್ವಾರವನ್ನು ತೆರೆಯಲಾಗಿದೆ. ಪಾಸ್ ಇದ್ದವರಿಗೆ ಮಾತ್ರ ಅವಕಾಶ ನೀಡಲಾಗಿದ್ದು ತೀವ್ರ ತಪಾಸಣೆ ನಡೆಸಿ ಬಿಡಲಾಗುತ್ತಿದೆ. ಅಧಿಕಾರಿಗಳು ಸಹಿತ ಮೊಬೈಲ್ ತೆಗೆದು ಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.

ಆಸ್ಪತ್ರೆ ಎದುರಿನ ಒಂದು ಬದಿಯ ರಸ್ತೆಯಲ್ಲಿ ಪಾರ್ಕಿಂಕ್ ಗೆ ವ್ಯವಸ್ಥೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News