ಲೋಕಸಭಾ ಚುನಾವಣೆಯ ಗೆಲುವು: ಮೋದಿ-ಅಮಿತ್ ಶಾಗೆ ಒಮರ್ ಅಬ್ದುಲ್ಲಾ ಅಭಿನಂದನೆ ಸಲ್ಲಿಸಿದ್ದು ಹೀಗೆ…

Update: 2019-05-23 11:06 GMT

ಹೊಸದಿಲ್ಲಿ, ಮೇ 23: ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಅಭಿನಂದಿಸಿದ್ದಾರೆ. ಇಬ್ಬರೂ  ವೃತ್ತಿಪರವಾಗಿ ಪಕ್ಷದ ಚುನಾವಣಾ ಪ್ರಚಾರವನ್ನು ನಿಭಾಯಿಸಿ ಜಯ ಗಳಿಸಿದ್ದಾರೆ ಎಂದು ಒಮರ್ ಹೇಳಿದ್ದಾರೆ.

“ಹಾಗಾದರೆ ಎಕ್ಸಿಟ್ ಪೋಲ್ ಗಳು ಸರಿಯಾಗಿವೆ. ಅತ್ಯುತ್ತಮ ನಿರ್ವಹಣೆಗಾಗಿ ಬಿಜೆಪಿ ಹಾಗೂ ಎನ್‍ ಡಿಎಗೆ ಅಭಿನಂದನೆ ಸಲ್ಲಿಸುವುದಷ್ಟೇ ಬಾಕಿ ಉಳಿದಿದೆ. ಪಿಎಂ ಮೋದಿ ಸಾಹಿಬ್ ಹಾಗೂ ಅಮಿತ್ ಶಾ ವಿಜಯೀ ಮೈತ್ರಿ ಸಾಧಿಸಿದ್ದಾರೆ ಹಾಗೂ ವೃತ್ತಿಪರವಾಗಿ ಪ್ರಚಾರ ನಿಭಾಯಿಸಿದ್ದಾರೆ. ಬ್ರಿಂಗ್ ಆನ್ ದಿ ನೆಕ್ಸ್ಟ್ ಫೈವ್ ಇಯರ್ಸ್'' ಎಂದು ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.

ಎಕ್ಸಿಟ್ ಪೋಲ್ ಗಳು ಬಿಜೆಪಿಗೆ 300ಕ್ಕೂ ಅಧಿಕ ಸ್ಥಾನಗಳು ಲಭಿಸಲಿದೆ ಎಂದು ಭವಿಷ್ಯ ನುಡಿದಾಗ ಅದು ಸ್ವೀಕಾರಾರ್ಹ ಎಂಬಂತೆ ಟ್ವೀಟ್ ಮಾಡಿದ್ದ ಅಬ್ದುಲ್ಲಾ ``ಪ್ರತಿಯೊಂದು ಎಕ್ಸಿಟ್ ಪೋಲ್ ಸುಳ್ಳಾಗಲು ಸಾಧ್ಯವಿಲ್ಲ. ಟಿವಿ  ಬಂದ್ ಮಾಡಿ, ಸೋಶಿಯಲ್ ಮೀಡಿಯಾದಿಂದ ಹೊರ ಬಂದು, ಮೇ 23ರಂದು ಭೂಮಿ ಈಗಲೂ ತನ್ನ ಕಕ್ಷೆಯಲ್ಲಿಯೇ ತಿರುಗುತ್ತಿದೆಯೇ ಎಂದು  ನೋಡುವ ಸಮಯ'' ಎಂದು  ಬರೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News