ಲೋಕಸಭಾ ಚುನಾವಣೆ : ಮೂರು ದಶಕದ ಬಳಿಕ ಕಾಂಗ್ರೆಸ್ ಪಾಲಾದ ಕಾಸರಗೋಡು

Update: 2019-05-23 13:51 GMT

ಕಾಸರಗೋಡು :   ಸಿಪಿಎಂನ ಭದ್ರ ಕೋಟೆಯಾದ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ  ಕ್ಷೇತ್ರವನ್ನು ಕಾಂಗ್ರೆಸ್ ಗೆಲ್ಲುವ ಮೂಲಕ   ಮೂರು ದಶಕದ  ಬಳಿಕ ಕಾಸರಗೋಡು ಲೋಕಸಭಾ  ಕ್ಷೇತ್ರ ಕಾಂಗ್ರೆಸ್ ಪಾಲಾಗಿದೆ.

ಕಾಂಗ್ರೆಸ್ ಅಭ್ಯರ್ಥಿ  ರಾಜ್ ಮೋಹನ್  ಉಣ್ಣಿತ್ತಾನ್  ತಮ್ಮ ಪ್ರತಿಸ್ಪರ್ಧಿ  ಸಿಪಿಎಂನ ಕೆ.ಪಿ ಸತೀಶ್ಚಂದ್ರನ್ ರನ್ನು  ಸೋಲಿಸಿದರು.  ಕಾಂಗ್ರೆಸ್ ಅಭ್ಯರ್ಥಿ ರಾಜ್ ಮೋಹನ್ ಉಣ್ಣಿ ತ್ತಾನ್ ಸಿಪಿಎಂನ ಕೆ. ಪಿ ಸತೀಷ್ಚಂದ್ರನ್  ವಿರುದ್ಧ ಸುಮಾರು 41, 648 ಅಂತರದಿಂದ ಗೆಲುವು ಸಾದಿಸಿದರು.

ಆರಂಭದಿಂದಲೇ ಏರಿಳಿಕೆ ಕಂಡು ಬಂದರೂ ಅಂತಿಮ ಸುತ್ತಿಗೆ  ಬಂದಾಗ ಉಣ್ಣಿತ್ತಾನ್ ಮೇಲುಗೈ ಸಾಧಿಸಿದರು.

ರಾಜ್ ಮೋಹನ್ ಉಣ್ಣಿತ್ತಾನ್ 4,70,345 , ಸತೀಶ್ಚಂದ್ರನ್ 4,28, 697 ಮತಗಳನ್ನು ಪಡೆದರೆ, ಬಿಜೆಪಿಯ ರವೀಶ ತಂತ್ರಿ ಕುಂಟಾರು  1, 73,934 ಮತಗಳನ್ನು ಪಡೆದು ತೃತೀಯ ಸ್ಥಾನಕ್ಕೆ  ತೃಪ್ತಿ ಪಟ್ಟುಕೊಂಡರು.

ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ 30 ವರ್ಷಗಳ ಬಳಿಕ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News