ಇವಿಎಂ ಸಹಿಗಳಲ್ಲಿ ವ್ಯತ್ಯಾಸ: ಕಾಂಗ್ರೆಸ್ ಅಭ್ಯರ್ಥಿ ಊರ್ಮಿಳಾ ಮಾತೋಂಡ್ಕರ್ ಆರೋಪ

Update: 2019-05-23 12:19 GMT

ಮುಂಬೈ, ಮೇ 23: ಇವಿಎಂ ಒಂದರಲ್ಲಿನ ಸಹಿಗಳು ತಾಳೆಯಾಗುತ್ತಿಲ್ಲ ಎಂದು ಮುಂಬೈ ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಊರ್ಮಿಳಾ ಮಾತೋಂಡ್ಕರ್ ದೂರಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆಯೆಂದು ಅವರು ತಿಳಿಸಿದ್ದಾರೆ.

ಬಿಜೆಪಿಯ ಗೋಪಾಲ್ ಶೆಟ್ಟಿ ಅವರ ವಿರುದ್ಧ ಸ್ಪರ್ಧಿಸಿರುವ ನಟಿ, ಶೆಟ್ಟಿಯವರಿಗಿಂತ 1,45,991 ಮತಗಳಷ್ಟು ಹಿನ್ನಡೆ ಸಾಧಿಸಿದ್ದಾರೆ. “ಮಗತನೆ ಎಂಬಲ್ಲಿನ ಇವಿಎಂ 17ಸಿ ಇದರಲ್ಲಿನ ಫಾರ್ಮ್ ನಲ್ಲಿ  ಸಹಿಗಳು ಮತ್ತು ಮಶೀನ್ ಸಂಖ್ಯೆಯಲ್ಲಿ ವ್ಯತ್ಯಾಸವಿದೆ,'' ಎಂದು ಊರ್ಮಿಳಾ ಟ್ವೀಟ್ ಮಾಡಿದ್ದಾರೆ.

ಮೊದಲ ಬಾರಿ  ಚುನಾವಣೆ ಸ್ಪರ್ಧಿಸಿರುವ ಊರ್ಮಿಳಾ ಈ ಲೋಕಸಭಾ  ಚುನಾವಣೆ ದೇಶದ ಪಾಲಿನ ನಿರ್ಣಾಯಕ ಚುನಾವಣೆ ಎಂದು ಈ ಹಿಂದೆ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News