ಅರುಣಾಚಲ ಪ್ರದೇಶದಲ್ಲಿ ಮೊದಲ ಬಾರಿಗೆ ಬಿಜೆಪಿ ಸರಕಾರ ಅಸ್ತಿತ್ವಕ್ಕೆ

Update: 2019-05-23 17:21 GMT

ಹೊಸದಿಲ್ಲಿ, ಮೇ 22: ವಿಧಾನ ಸಭೆ ಚುನಾವಣೆ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಅರುಣಾಚಲ ಪ್ರದೇಶದಲ್ಲಿ ಅತ್ಯಧಿಕ ಸ್ಥಾನ ಗಳಿಸಿರುವ ಬಿಜೆಪಿ ತನ್ನದೇ ಶಾಸಕರ ಬೆಂಬಲದೊಂದಿಗೆ ಮೊದಲ ಬಾರಿಗೆ ಸರಕಾರ ರಚಿಸಲಿದೆ.

ಎಪ್ರಿಲ್ 11ರಂದು ವಿಧಾನ ಸಭೆಯ 57 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 32 ಸ್ಥಾನಗಳನ್ನು ಪಡೆದಿದೆ ಎಂದು ಮೂಲಗಳು ತಿಳಿಸಿವೆ. 60 ಸದಸ್ಯರ ವಿಧಾನ ಸಭೆಯಲ್ಲಿ ಸರಳ ಬಹುಮತಕ್ಕೆ ಪಕ್ಷಕ್ಕೆ 31 ಸದಸ್ಯರ ಬೆಂಬಲದ ಅಗತ್ಯ ಇದೆ. ವಿಜಯಿಯಾದವರಲ್ಲಿ ಸಗಲೀ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ನಬಮ್ ಟುಕಿ, ಪಸಿಘಾಟ್ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಾಜಿ ಸಂಸದ ನಿನೋಂಗ್ ಎರಿಂಗ್ ಹಾಗೂ ಉಪ ಚೌಖಮ್ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಉಪ ಮುಖ್ಯಮಂತ್ರಿ ಚೌನಾ ಮೈನ್ ಸೇರಿದ್ದಾರೆ.

ಸೋತವರಲ್ಲಿ ಅಲೋ ಲಿಬಾಂಗ್‌ನ ಅಭ್ಯರ್ಥಿಯಾಗಿರುವ ಮಾಜಿ ಮುಖ್ಯಮಂತ್ರಿ ಹಾಗೂ ಜನತಾದಳ (ಯು) ಅಭ್ಯರ್ಥಿ ಗೇಗೋಂಗ್ ಅಪಾಂಗ್ ಕೂಡ ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News