​ಲೋಕಸಭೆ: ಪಕ್ಷಗಳ ಅಂತಿಮ ಬಲಾಬಲ ಹೀಗಿದೆ..

Update: 2019-05-24 03:42 GMT

ಹೊಸದಿಲ್ಲಿ, ಮೇ 24: ಹದಿನೇಳನೇ ಲೋಕಸಭೆಯ ಬಹುತೇಕ ಎಲ್ಲ ಸ್ಥಾನಗಳ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ 304 ಸ್ಥಾನಗಳನ್ನು ಗಳಿಸುವ ಮೂಲಕ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬಂದಿದೆ. ಬಿಜೆಪಿ ಮಿತ್ರಪಕ್ಷಗಳು 46 ಸ್ಥಾನಗಳನ್ನು ಪಡೆದಿದ್ದು, ಎನ್‌ಡಿಎ 350 ಸ್ಥಾನಗಳಲ್ಲಿ ಜಯ ಗಳಿಸಿದಂತಾಗಿದೆ. ಎನ್‌ಡಿಎ ಕಳೆದ ಚುನಾವಣೆಗೆ ಹೋಲಿಸಿದರೆ ಒಟ್ಟಾರೆ ಎರಡು ಸ್ಥಾನಗಳನ್ನು ಕಳೆದುಕೊಂಡಿದೆ. 436 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಕಳೆದ ಬಾರಿಗಿಂತ 22 ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿದೆ.

ಕಾಂಗ್ರೆಸ್ ಪಕ್ಷದ ಅಭಿಯಾನ 53 ಸ್ಥಾನಗಳಿಗೆ ಕೊನೆಗೊಂಡಿದ್ದು, ಈ ಬಾರಿಯೂ ಕೂದಲೆಳೆ ಅಂತರದಲ್ಲಿ ಅಧಿಕೃತ ವಿರೋಧ ಪಕ್ಷದ ಸ್ಥಾನಮಾನ ಕೈತಪ್ಪಿದೆ. ಲೋಕಸಭೆಯ ಒಟ್ಟು ಬಲದ ಶೇಕಡ 10ನ್ನು ಗಳಿಸಿದಲ್ಲಿ ಮಾತ್ರ ಅಧಿಕೃತ ವಿರೋಧ ಪಕ್ಷದ ಸ್ಥಾನಮಾನ ಸಿಗುತ್ತದೆ. ಕಾಂಗ್ರೆಸ್ ಇನ್ನು ಎರಡು ಸ್ಥಾನಗಳನ್ನು ಗಳಿಸಿದಲ್ಲಿ ಇದು ಪ್ರಾಪ್ತವಾಗುತ್ತಿತ್ತು.

ಉಳಿದಂತೆ ಡಿಎಂಕೆ 23, ಯುವಜನ ಶ್ರಮಿಕ ರೈತ್ ಕಾಂಗ್ರೆಸ್ ಪಾರ್ಟಿ 22, ಅಖಿಲ ಭಾರತ ತೃಣಮೂಲ ಕಾಂಗ್ರೆಸ್ 21, ಶಿವಸೇನೆ 18, ಸಂಯುಕ್ತ ಜನತಾದಳ 16, ಬಿಜು ಜನತಾದಳ 11 ಹಾಗೂ ಬಹುಜನ ಸಮಾಜ ಪಕ್ಷ 10 ಸ್ಥಾನಗಳನ್ನು ಪಡೆದಿದ್ದು, ಎರಡಂಕಿ ತಲುಪಿದ ಸಾಧನೆ ಮಾಡಿವೆ.

ತೆಲಂಗಾಣ ರಾಷ್ಟ್ರೀಯ ಸಮಿತಿ 9, ಲೋಕ ಜನಶಕ್ತಿ ಪಾರ್ಟಿ 6, ಎನ್‌ಸಿಪಿ ಹಾಗೂ ಸಮಾಜವಾದಿ ಪಕ್ಷ ತಲಾ 5, ಪಕ್ಷೇತರರು ನಾಲ್ಕು, ಸಿಪಿಎಂ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್, ತೆಗುಲುದೇಶಂ ಮತ್ತು ನ್ಯಾಷನಲ್ ಕಾನ್ಫರೆನ್ಸ್ ತಲಾ 3, ಎಐಎಂಇಐಎಂ, ಸಿಪಿಐ ಹಾಗೂ ಶಿರೋಮಣಿ ಅಕಾಲಿದಳ ತಲಾ 2 ಸ್ಥಾನಗಳನ್ನು ಗೆದ್ದಿವೆ.

ಆಮ್‌ಆದ್ಮಿ ಪಾರ್ಟಿ, ಅಪ್ನಾ ದಳ್, ಅಪ್ನಾ ದಳ (ಸೋನೆಲಾಲ್), ಎಐಎಡಿಎಂಕೆ, ಆಲ್ ಇಂಡಿಯಾ ಯುನೈಡೆಟ್ ಡೆಮಾಕ್ರಟಿಕ್ ಫ್ರಂಟ್, ಅಜ್ಸು ಪಾರ್ಟಿ, ಜೆಡಿಎಸ್, ಜಾರ್ಖಂಡ್ ಮುಕ್ತಿ ಮೋರ್ಚಾ, ಕೇರಳ ಕಾಂಗ್ರೆಸ್ (ಎಂ), ಎಂಎನ್‌ಎಫ್, ಎನ್‌ಡಿಪಿಪಿ, ನಾಗಾ ಪೀಪಲ್ಸ್ ಫ್ರಂಟ್, ನ್ತಾಷನಲ್ ಪೀಪಲ್ಸ್ ಪಾರ್ಟಿ, ರೆವಲ್ಯೂಶನರಿ ಸೋಶಲಿಸ್ಟ್ ಪಾರ್ಟಿ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಹಾಗೂ ವಿದ್ಯುತ್ತಲೈ ಚಿರುತೈಗಲ್ ಕಚ್ಚಿ ತಲಾ ಒಬ್ಬರು ಸಂಸದರನ್ನು ಲೋಕಸಭೆಯಲ್ಲಿ ಹೊಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News