ಬೈಚುಂಗ್ ಭುಟಿಯಾಗೆ ಸಿಕ್ಕಿದ್ದು ಕೇವಲ 70 ಮತಗಳು!

Update: 2019-05-24 16:37 GMT

ಗ್ಯಾಂಗ್ಟಕ್, ಮೇ.24: ಸಿಕ್ಕಿಂ ವಿಧಾನ ಸಭೆಗೆ ನಡೆದ ಚುನಾವಣೆಯಲ್ಲಿ ಭಾರತದ ಮಾಜಿ ಫುಟ್ಬಾಲ್ ಆಟಗಾರ ಬೈಚುಂಗ್ ಭುಟಿಯಾ ಗ್ಯಾಂಗ್ಟಕ್ ಕ್ಷೇತ್ರದಲ್ಲಿ ಕೇವಲ 70 ಮತಗಳನ್ನಷ್ಟೇ ಪಡೆಯುವ ಮೂಲಕ ಠೇವಣಿಯನ್ನೂ ಕಳೆದುಕೊಂಡಿದ್ದಾರೆ. ಭುಟಿಯಾ, ಸಿಕ್ಕಿಂನ ಗ್ಯಾಂಗ್ಟಕ್ ಮತ್ತು ತುಮೆನ್ ಲಿಂಗ್ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರು. ಈ ಎರಡೂ ಕ್ಷೇತ್ರಗಳಲ್ಲಿ ಅವರು ಹೀನಾಯ ಸೋಲನುಭವಿಸಿದ್ದಾರೆ.

ಗುರುವಾರ ಹೊರಬಿದ್ದ ರಾಜ್ಯ ವಿಧಾನಸಭಾ ಫಲಿತಾಂಶದಲ್ಲಿ ರಾಜ್ಯವನ್ನು ಐದು ಅವಧಿಗೆ ಆಳಿದ ಪವನ್ ಚಮ್ಲಿಂಗ್ ನೇತೃತ್ವದ ಸಿಕ್ಕಿಂ ಪ್ರಜಾಸತಾತ್ಮಕ ರಂಗ ಸರಕಾರವನ್ನು ಮತದಾರ ತಿರಸ್ಕರಿಸಿ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾದ ಕೈಗೆ ಅಧಿಕಾರ ನೀಡಿದ್ದಾನೆ. 2018ರ ಎಪ್ರಿಲ್‌ನಲ್ಲಿ ತನ್ನದೇ ಹಮ್ರಿ ಸಿಕ್ಕಿಂ ಪಾರ್ಟಿಯನ್ನು ಸ್ಥಾಪಿಸುವುದಾಗಿ ಭೂತಿಯ ಘೋಷಣೆ ಮಾಡಿದ್ದರು. ಭುಟಿಯಾ 2014ರ ಲೋಕಸಭಾ ಚುನಾವಣೆ ಮತ್ತು 2016ರ ವಿಧಾನಸಭಾ ಚುನಾವಣೆಯನ್ನು ತೃಣಮೂಲ ಕಾಂಗ್ರೆಸ್ ಟಿಕೆಟ್‌ನಿಂದ ಸ್ಪರ್ಧಿಸಿದ್ದರು. ಆದರೆ ಎರಡೂ ಚುನಾವಣೆಗಳಲ್ಲಿ ಅವರು ಹೀನಾಯ ಸೋಲನುಭವಿಸಿದ್ದರು. ಟಿಎಂಸಿಯಲ್ಲಿ ನಾ  ಹೊರಗಿನವನಂತೆ ಭಾಸವಾಗುತ್ತದೆ. ಸಿಕ್ಕಿಂನ ಜನತೆ ನನ್ನನ್ನು ಮಣ್ಣಿನ ಮಗನಾಗಿ ಸ್ವಾಗತಿಸಬೇಕೆಂದು ನಾನು ಬಯಸುತ್ತೇನೆ ಎಂದು ಬೈಚುಂಗ್ ಭೂತಿಯ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News