×
Ad

ಒಡಿಶಾ ವಿಧಾನಸಭೆಗೆ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಗುಂಡಿಗೆ ಬಲಿ

Update: 2019-05-24 22:38 IST

ಭುವನೇಶ್ವರ,ಮೇ 24: ಬುಧವಾರ ದುಷ್ಕರ್ಮಿಗಳ ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡು ಬೆರ್ಹಾಮಪುರ ಆಸ್ಪತ್ರೆಗೆ ದಾಖಲಾಗಿದ್ದ ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ಅಕ್ಸಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಮನೋಜ್ ಕುಮಾರ್ ಜೆನಾ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಕೊನೆಯುಸಿರೆಳೆದಿದ್ದಾರೆ.

ಜೆನಾ ಗುರುವಾರ ಸಂಜೆ ಭುವನೇಶ್ವರಕ್ಕೆ ಪ್ರಯಾಣಿಸುತ್ತಿದ್ದಾಗ ಆರು ಜನರ ತಂಡ ದಾಳಿ ನಡೆಸಿ ಆಂಧ್ರ ಪ್ರದೇಶದತ್ತ ಪರಾರಿಯಾಗಿದೆ. ರಾಜಕೀಯ ವೈರತ್ವ ದಾಳಿಗೆ ಕಾರಣವಲ್ಲ. ಹಳೆಯ ವೈಷಮ್ಯಗಳು ಮತ್ತು ಜೆನಾರ ಕಳ್ಳಭಟ್ಟಿ ವ್ಯವಹಾರದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎಂದು ಬೆರ್ಹಾಮಪುರ ಎಸ್‌ಪಿ ಪಿನಾಕ ಮಿಶ್ರಾ ತಿಳಿಸಿದರು. ಜೆನಾ ಎರಡು ಕೊಲೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದರು.

ಗುಂಡಿನ ದಾಳಿಯಲ್ಲಿ ಜೆನಾ ಸಹವರ್ತಿ ಅನಿಲ ಸ್ವೈಯ್ನ ಗಾಯಗೊಂಡಿದ್ದು,ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News