ಸ್ವದೇಶಿ, ನಿರ್ದೇಶಿತ ಬಾಂಬ್ ಯಶಸ್ವಿ ಪರೀಕ್ಷೆ

Update: 2019-05-24 18:05 GMT

ಹೊಸದಿಲ್ಲಿ, ಮೇ 24: ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ರಾಜಸ್ಥಾನದ ಪರೀಕ್ಷಾ ಪ್ರಯೋಗ ವಲಯ ಪೋಖರಣ್‌ನಲ್ಲಿ ಸ್ವದೇಶಿ ಸುಧಾರಿತ 500 ಕಿ.ಗ್ರಾಂ.ನ ‘ನಿರ್ದೇಶಿತ ಬಾಂಬ್’ (ಇನರ್ಸಿಯಲಿ ಗೈಡೆಡ್ ಬಾಂಬ್) ಅನ್ನು ಶುಕ್ರವಾರ ಯಶಸ್ವಿ ಪರೀಕ್ಷಾರ್ಥ ಪ್ರಯೋಗ ನಡೆಸಿದೆ.

‘ನಿರ್ದೇಶಿತ ಬಾಂಬ್’ ಅನ್ನು ಸುಖೋಯಿ ಯುದ್ಧ ವಿಮಾನದಿಂದ ಯಶಸ್ವಿಯಾಗಿ ಪ್ರಯೋಗಾರ್ಥ ಪರೀಕ್ಷೆ ನಡೆಸಲಾಯಿತು. ಇದು 30 ಕಿಲೋ ಮೀಟರ್ ದೂರದ ಗುರಿಯನ್ನು ನಿಖರವಾಗಿ ಹೊಡೆದುರುಳಿಸುತ್ತದೆ. ‘ನಿರ್ದೇಶಿತ ಬಾಂಬ್’ ಇಚ್ಛಿತ ವಲಯಕ್ಕೆ ತಲುಪುತ್ತದೆ ಹಾಗೂ ಗುರಿಯನ್ನು ಅತಿ ನಿಖರತೆಯಿಂದ ಹೊಡೆದುರುಳಿಸುತ್ತದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ರಾಜಸ್ಥಾನದ ಪೋಖರಣ್‌ನಿಂದ ಎಸ್‌ಯು-30 ಎಂಕೆಐ ವಿಮಾನದಿಂದ 500 ಕಿ.ಗ್ರಾಂ.ನ ‘ನಿರ್ದೇಶಿತ ಬಾಂಬ್’ ಅನ್ನು ಯಶಸ್ವಿಯಾಗಿ ಪರೀಕ್ಷಾರ್ಥ ಪ್ರಯೋಗ ನಡೆಸಲಾಯಿತು’’ ಎಂದು ಡಿಆರ್‌ಡಿಒ ತಿಳಿಸಿದೆ.

ಭಾರತೀಯ ವಾಯು ಪಡೆ ಸೂಪರ್‌ಸೋನಿಕ್ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಯ ವೈಮಾನಿಕ ಆವೃತ್ತಿಯನ್ನು ಅಂಡಮಾನ್ ಹಾಗೂ ನಿಕೋಬಾರ್ ದ್ವೀಪದಲ್ಲಿ ಸುಖೋಯ್ ಜೆಟ್‌ನಿಂದ ಯಶಸ್ವಿಯಾಗಿ ಹಾರಿಸಿದ ಬಳಿಕ ಈ ‘ನಿರ್ದೇಶಿತ ಬಾಂಬ್’ನ ಪರೀಕ್ಷಾರ್ಥ ಪ್ರಯೋಗ ನಡೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News